ಸಂಪುಟ ವಿಸ್ತರಣೆಯಲ್ಲಿ ಛಲವಾದಿ ಮತ್ತು ಮಾದಿಗ ಸಮುದಾಗಳಿಗೆ ಮಂತ್ರಿಸ್ಥಾನ ನೀಡುವಂತೆ ಒತ್ತಾಯ

ಬೆಂಗಳೂರು,ಡಿ.18- ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿದಲಿತ ಸಮುದಾಯದ ಉಪಜಾತಿಗಳಾದ ಛಲವಾದಿ ಮತ್ತು ಮಾದಿಗ ಸಮುದಾಯಗಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಸಾಮಾಜಿಕ ನ್ಯಾಯ ಪರಿಷತ್ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಜೆಡಿಎಸ್‍ನಲ್ಲಿರುವ ಏಳು ಮಂದಿ ದಲಿತ ಶಾಸಕರ ಪೈಕಿ ಛಲವಾದಿ ಜನಾಂಗದಆರು ಶಾಸಕರಿದ್ದಾರೆ.ಅವರುಗಳು ಜೆಡಿಎಸ್‍ಗೆ ಅಚಲ ನಿಷ್ಠೆ ತೋರಿಸಿದ್ದಾರೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ಅವರಲ್ಲಿಯಾರಿಗಾದರೂ ಮಂತ್ರಿ ಸ್ಥಾನ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿಸಾಮಾಜಿಕ ನ್ಯಾಯ ಪರಿಷತ್‍ಅಧ್ಯಕ್ಷಅನಂತರಾಯಪ್ಪ ಮನವಿ ಮಾಡಿದರು.

ಕಳೆದ ವಿಧಾನಸಭೆ ಹಾಗೂ ನಂತರ ನಡೆದ ಉಪಚುನಾವಣೆಗಳಲ್ಲಿ ಬಲಗೈ ಜನಾಂಗಜೆಡಿಎಸ್‍ಗೆ ಬೆಂಬಲ ನೀಡಿತ್ತು.ಇದಕ್ಕೆಛಲವಾದಿ ಜನಾಂಗ ಪ್ರಾಬಲ್ಯವಿರುವ ಮಂಡ್ಯಜಿಲ್ಲೆಯಎಲ್ಲ ಏಳು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿರುವುದು ಸಾಕ್ಷಿಎಂದರು.

ಮಾದಿಗಜಾತಿಯಿಂದ ಕೇವಲ ಒಬ್ಬರು ಶಾಸಕರುಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆಕಾಂಗ್ರೆಸ್ ಪಕ್ಷ ಆ ಜನಾಂಗದವರಿಗೆ ಮಂತ್ರಿ ಸ್ಥಾನ ನೀಡಲು ನಿರಾಕರಿಸಿತು ಎಂದುಅವರು ಆರೋಪಿಸಿದರು.

ವಿಧಾನಪರಿಷತ್ ಸದಸ್ಯರಾದಆರ್.ಬಿ.ತಿಮ್ಮಾಪುರ ಹಾಗೂ ಆರ್.ಧರ್ಮಸೇನಾಅವರು ಮಾದಿಗಜಾತಿಗೆ ಸೇರಿದವರಾಗಿದ್ದು, ಇವರ ಪೈಕಿ ಯಾರಾದರೊಬ್ಬರಿಗೆ ಮಂತ್ರಿ ಸ್ಥಾನ ಕೊಡಬಹುದಾಗಿತ್ತು. ಆದರೆಕೊಡದೆಅನ್ಯಾಯ ಮಾಡಲಾಗಿದೆಎಂದುಅನಂತರಾಯಪ್ಪಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿಕರ್ನಾಟಕಅಹಿಂದ ಹೋರಾಟ ಸಮಿತಿಅಧ್ಯಕ್ಷ ಮುತ್ತುರಾಜ್, ಜನತಾರಂಗದಅಧ್ಯಕ್ಷಎನ್.ರವಿಚಂದ್ರ, ಡಾ.ಅಂಬೇಡ್ಕರ್ ಸಮಾಜವಾದಿ ಪಕ್ಷದಅಧ್ಯಕ್ಷ ಎಂ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ