ಬೆಂಗಳೂರು, ಡಿ.18- ಸುಳ್ವಾಡಿ ದೇಗುಲದ ಪ್ರಸಾದಕ್ಕೆ ಬೆರೆಸಿರುವ ವಿಷಕಾರಿಕ್ರಿಮಿನಾಶಕವನ್ನುಎಲ್ಲಿಖರೀದಿಸಲಾಗಿತ್ತು..? ಈ ಬಗ್ಗೆ ಪೊಲೀಸರು ಕೀಟನಾಶಕ ಮಾರಾಟ ಮಾಡುವ ಅಂಗಡಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.ಕೊಳ್ಳೇಗಾಲ, ಹನೂರಿನಲ್ಲಿ
ಮೋನೋಕ್ರೋಟೋಪಸ್‍ಇರುವಕೀಟನಾಶಕದೊರೆಯುತ್ತದೆ.ದೇಗುಲದದುರಂತದಲ್ಲಿ ಪ್ರಸಾದ ಸೇವಿಸಿ ಮಡಿದವರದೇಹದಲ್ಲಿ ಈ ವಿಷಕಾರಿ ಅಂಶ ಇರುವುದು ಪತ್ತೆಯಾಗಿದೆ. ಹಾಗಾದರೆ ಈ ಕೀಟನಾಶಕವನ್ನುಯಾವಅಂಗಡಿಯಿಂದಯಾರು ಖರೀದಿಸಿದ್ದಾರೆ ಎಂಬ ಬಗ್ಗೆ ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಕೀಟನಾಶಕಕ್ಕೆ ಬಳಸುವ ಈ ಔಷಧಿ ಸಿಕ್ಕಿದ್ದಾದರೂ ಎಲ್ಲಿಂದ..? ಯಾರುಇದನ್ನು ಪ್ರಸಾದದಲ್ಲಿ ಬೆರೆಸಿದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಈ ಪ್ರಕರಣದತನಿಖೆಗೆ ನಾಲ್ಕು ತಂಡಗಳನ್ನು ರಚಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇಷ್ಟು ಪ್ರಮಾಣದಲ್ಲಿಜನರ ಸಾವಿಗೆ ಕಾರಣವಾದ ಈ ಕ್ರಿಮಿನಾಶಕಖರೀದಿಯ ಬಗ್ಗೆ ಅನುಮಾನ ಮೂಡಿದ್ದು, ಸುತ್ತಮುತ್ತಇರುವಕ್ರಿಮಿನಾಶಕ ವ್ಯಾಪಾರ ಮಾಡುವ ಅಂಗಡಿಗಳ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದಾರೆ.ಡಿ.14ರಂದುಕಿಚ್ಚುಗುತ್ತಿ ಮಾರಮ್ಮದೇವಾಲಯದಲ್ಲಿ ವಿಷಮಿಶ್ರಿತ ಪ್ರಸಾದ ವಿತರಣೆಯಿಂದಾಗಿ ಸುಮಾರು 14 ಜನ ಸಾವನ್ನಪ್ಪಿದ್ದರು. ಈ ಪ್ರಸಾದದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು ಸಾಬೀತಾಗಿದೆ.ಈ ಹಿನ್ನೆಲೆಯಲ್ಲಿ ಪೆÇಲೀಸರುಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಕಿಚ್ಚುಗುತ್ತಿ ಮಾರಮ್ಮದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಸರ್ಕಾರಚಿಂತನೆ ನಡೆಸಿದೆ:
ಕಿಚ್ಚುಗುತ್ತಿ, ಡಿ.18: ಇದೇಡಿ.14 ರಂದುದೇವಾಲಯದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವನೆಯಿಂದ ಸುಮಾರು 14 ಜನ ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಶದಲ್ಲಿರುವದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಕೊಳ್ಳೇಗಾಲದ ಗಡಿಗ್ರಾಮದದೇವಾಲಯದಲ್ಲಿಇತ್ತೀಚೆಗೆಆದಾಯ ಹೆಚ್ಚಾಗಿ ಟ್ರಸ್ಟಿಗಳ ನಡುವೆ ಸಂಘರ್ಷಉಂಟಾಗಿತ್ತು.ದೇವಾಲಯದಆದಾಯದ ಮೇಲೆ ಕಣ್ಣು ಬಿದ್ದು ಪ್ರಸಾದಕ್ಕೆ ವಿಷ ಬೆರೆಸಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ.
ದೇಗುಲ ಪ್ರಸಾದ ಸೇವಿಸಿ ಸಾವನ್ನಪ್ಪಿದದುರಂತ ಪ್ರಕರಣದ ಬಗ್ಗೆ ಪೊಲೀಸರು ವ್ಯಾಪಕತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಠಾಧೀಶರುದೇವಾಲಯವನ್ನು ಮುಜರಾಯಿ ವಶಕ್ಕೆ ಪಡೆಯಲು ನಮ್ಮದೇನೂಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ದೇವಾಲಯವನ್ನು ಮುಜರಾಯಿ ವಶಕ್ಕೆ ಪಡೆಯುವ ಸಂಬಂಧ ಸರ್ಕಾರಚಿಂತನೆ ನಡೆಸಿದ್ದು, ಇದಕ್ಕೆ ಬೇಕಾದಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದೆ.
ಪ್ರಸಾದ ಸೇವಿಸಿದ ದುರಂತದಲ್ಲಿ ಸಂತ್ರಸ್ಥರಾಗಿರುವ 101ಕ್ಕೂ ಹೆಚ್ಚು ಮಂದಿ ಮೈಸೂರಿನಕೆ.ಆರ್.ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಸ್ಥಿತಿ ಇನ್ನೂಗಂಭೀರವಾಗಿದೆಎಂದು ತಿಳಿದುಬಂದಿದೆ. ಅವರನ್ನು ಉಳಿಸಲು ವೈದ್ಯರುಎಲ್ಲಾರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.