ಬೆಂಗಳೂರು, ಡಿ.18-ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿದೇವಾಲಯದಲ್ಲಿ 12ನೆ ವರ್ಷದ ವಾರ್ಷಿಕ ಬ್ರಹ್ಮೋತ್ಸವ, ಗೋಪುರ ಬ್ರಹ್ಮ ಕಳಶ ಪ್ರತಿಷ್ಠೆ, ಸಹಸ್ರಕುಂಭಾಭಿಷೇಕ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ವಿವಿಧಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಮುಂಜಾನೆ ಸ್ವಾಮಿಗೆಅಭಿಷೇಕ, ಅಲಂಕಾರ, ಸಹಸ್ರನಾಮಾರ್ಚನೆ, ಅಷ್ಠಾವದಾನ ಸೇವೆ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.ನಂತರ ವೈಕುಂಠದ್ವಾರ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ವೈಕುಂಠದರ್ಶನಕ್ಕೆ ಅವಕಾಶ ಕಲ್ಪಿಸಿ ಲಡ್ಡು ಪ್ರಸಾದ ವಿತರಿಸಲಾಯಿತು.
ರಾತ್ರಿ 11.30ರ ವರೆಗೂ ಸಾರ್ವಜನಿಕರಿಗೆ ವೈಕುಂಠ ಮಹಾದ್ವಾರ ಪ್ರವೇಶಾವಕಾಶ ನೀಡಲಾಗಿದೆ. ನಾಳೆ ಮುಂಜಾನೆ 5 ಗಂಟೆಗೆ ಸುಪ್ರಭಾತ ಸೇವೆ, 6 ಗಂಟೆಗೆ ಶ್ರೀ ಲಕ್ಷ್ಮೀ-ವೆಂಕಟೇಶ್ವರ ಸ್ವಾಮಿಯತಿರುಕಲ್ಯಾಣೋತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ 5.30 ರಿಂದಜಾನಪದಕಲಾತಂಡದೊಂದಿಗೆ ಸಣ್ಣಕ್ಕಿ ಬಯಲು ಮತ್ತು ಕಾಮಾಕ್ಷಿಪಾಳ್ಯ ಮುಖ್ಯ ಬೀದಿಗಳಲ್ಲಿ ಪಲ್ಲಕ್ಕಿಉತ್ಸವ ನಡೆಯಲಿದ್ದು, ರಾತ್ರಿ 9.30ಕ್ಕೆ ಸ್ವಾಮಿಯವರ ಶಯನೋತ್ಸವ ಪೂಜೆ ನೆರವೇರಲಿದೆ.