ಉಡುಪಿ ಮತ್ತು ಮಂಗಳೂರಿನಲ್ಲಿ ಓಲಾ ಟ್ಯಾಕ್ಸಿ ಸರ್ವೀಸ್‍ಗೆ ತಡೆ, ಸಚಿವ ಡಿ.ಸಿ.ತಮ್ಮಣ್ಣ

ಬೆಳಗಾವಿ(ಸುವರ್ಣಸೌಧ), ಡಿ.18- ಮಂಗಳೂರು, ಉಡುಪಿಯಲ್ಲಿ ಓಲಾ ಕಂಪನಿ ಟ್ಯಾಕ್ಸಿ ಸರ್ವೀಸ್‍ಗೆ ತಡೆ ನೀಡಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ರಘುಪತಿ ಭಟ್ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಓಲಾ ಕಂಪನಿ 2016ರ ಜೂನ್ 20 ರಂದು ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ಒದಗಿಸಲು 50 ಸಾವಿರ ಠೇವಣಿ ಇಟ್ಟು ಅನುಮತಿ ಪಡೆದುಕೊಂಡಿದೆ. ಇನ್ನು ಬೇರೆ ಯಾವುದೇ ನಗರದಲ್ಲಿ ಸೇವೆ ಒದಗಿಸಬೇಕಾದರೂ ಸ್ಥಳೀಯ ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಆದರೆ ಮಂಗಳೂರು, ಉಡುಪಿ ನಗರಗಳಲ್ಲಿ ಇತ್ತೀಚೆಗೆ ಸೇವೆ ಆರಂಭಿಸಲು ಮುಂದಾಗಿದೆ.

ಅಲ್ಲಿ ಯಾವುದೇ ಅನುಮತಿ ಪಡೆದಿಲ್ಲ. ಬೆಂಗಳೂರಿಗೆ ಪಡೆದ ಅನುಮತಿಯನ್ನೇ ವಿಸ್ತರಣೆಮಾಡಲಾಗುತ್ತಿದೆ. ಸ್ಥಳೀಯ ಟ್ಯಾಕ್ಸಿ ಚಾಲಕರು ಓಲಾ ಕಂಪನಿ ಸೇವೆ ವಿರೋಧಿಸಿ ಪ್ರತಿಭಟಿಸಿದ್ದಾರೆ. ನ್ಯಾಯಾಲಯ ಕೂಡ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದು ಗಮನ ಸೆಳೆದರು.

ಆಗ ಉತ್ತರಿಸಿದ ಸಚಿವರು, ನ್ಯಾಯಾಲಯದ ತಡೆಯಾಜ್ಞೆ ಇದೆ. ವಿವಾದ ಇತ್ಯರ್ಥವಾಗುವವರೆಗೂ ತಡೆಯಾಜ್ಞೆ ವಿಸ್ತರಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ