ಬೆಂಗಳೂರು,ಡಿ.17-ನಗರದಲ್ಲಿ ನಡೆದ ಫಿಟ್ಫ್ಯಾಕ್ಟರ್ ಇಂಡಿಯಾ ಪ್ರೀಮಿಯರ್ ಫಿಟ್ನೆಸ್ ಮಾಡೆಲಿಂಗ್ ಶೋ ಮತ್ತು ದೇಹದಾಢ್ರ್ಯ ಪ್ರದರ್ಶನ ಬಾಡಿ ಪವರ್ ಸಾವಿರಾರು ಫಿಟ್ನೆಸ್ ಉತ್ಸಾಹಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಾಡಿ ಪವರ್ನ ಸಿಇಒ ನಿಕ್ ಓರ್ಟನ್, ಬಾಲಿವುಡ್ ಸೂಪರ್ಸ್ಟಾರ್ಗಳಿಗೆ ತರಬೇತಿ ನೀಡುತ್ತಾ ಭಾರತದಲ್ಲಿ ಬಾಡಿಪವರ್ ಸಂಸ್ಥೆಯನ್ನು ನಾನು ಪ್ರಾರಂಭಿಸಿದ್ದರೂ ಪ್ರತಿಯೊಬ್ಬರೂ ಆರೋಗ್ಯವಾಗಿರುವ ಬಗ್ಗೆ ಸಂದೇಶ ನೀಡುವುದು ನನ್ನ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಇಂತಹ ಪ್ರದರ್ಶನಗಳು ಹೆಚ್ಚು ಸಹಕಾರಿ ಎಂದರು.
ಫಿಟ್ನೆಸ್ ಕುರಿತಾದ ಜನರ ಪ್ರವೃತ್ತಿಗಳಲ್ಲಿ ಮಹತ್ತರ ಬದಲಾವಣೆ ಇತ್ತೀಚೆಗೆ ಕಂಡಿದ್ದು ದೇಶದ ಪ್ರತಿಮೂಲೆಯನ್ನೂ ಇದು ತಲುಪಿದೆ. ಈ ಬದಲಾವಣೆ ಮುನ್ನಡೆಸುವುದರಲ್ಲಿ ಬಾಡಿ ಪವರ್ ವೇಗವರ್ಧಕವಾಗಿ ಕೆಲಸ ಮಾಡುತ್ತದೆ.ನಮ್ಮ ಈ ರೀತಿಯ ಎಕ್ಸ್ಪೋ ಯುವಜನರಲ್ಲಿ ಉತ್ಸಾಹ ತರಲಿದೆ.ಈ ವರ್ಷದ ಬಾಡಿಪವರ್ಟೂರ್ ಸಂಪೂರ್ಣಉತ್ಸಾಹ, ಸವಾಲುಗಳು ಮತ್ತು ಶ್ರೇಷ್ಠ ಗುಣಮಟ್ಟದ ಸ್ಪರ್ಧೆಗಳನ್ನು ಹೊಂದಿದೆ ಎಂದು ಹೇಳಿದರು.
ಬಾಡಿಪವರ್ನ ಜೈಪುರ, ದೆಹಲಿ, ಅಹಮದಾಬಾದ್, ಕೊಲ್ಕತ್ತಾ, ಪುಣೆ, ಮುಂಬೈ, ಹೈದರಾಬಾದ್ ಸೇರಿದಂತೆ ಬೆಂಗಳೂರಿನಲ್ಲಿ ಅಪಾರ ಯಶಸ್ಸು ಗಳಿಸಿದ್ದು ಪ್ರದರ್ಶನ ಚೆನ್ನೈನಲ್ಲೂ ನಡೆಯಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಫೋರಮ್ ಮಾಲ್ನಲ್ಲಿ ನಡೆದ ಶೋನಲ್ಲಿ ಅಭಿಮಾನಿಗಳಿಗೆ ಮಿಸ್ಟರ್ ಬಾಡಿ ಪವರ್ ವೀಕ್ಷಿಸುವ ಅಪೂರ್ವ ಅವಕಾಶ ಲಭಿಸಿತು.ಈ ಕಾರ್ಯಕ್ರಮದಲ್ಲಿ ಐಎಫ್ಬಿಬಿ ಹಾಲ್ಆಫ್ ಫೇಮ್ಕೆವಿನ್ ಲೆವ್ರೋ ಖ್ಯಾತಐಎಫ್ಬಿಬಿ ಪೆÇ್ರಜಾಕೊಬ್ ಸುಮನ ಮತ್ತು ಪಾಲ್ ಪೆÇಲೊಸೆಝ್, ಐಎಫ್ಬಿಬಿ ಬಿಕಿನಿ ದಿವಾ ಜಗೀನ್ಸ್ಕಕಮಿನ್ಸ್ಕ, ಡಬ್ಲ್ಯೂಬಿಎಫ್ಎಫ್ ಪೆÇ್ರ.ಪಿಸಿಎ ಪೆÇ್ರ.ಮಸಲ್ ಮಾಡೆಲ್ಟಾಮ್ಕೋಲ್ಮನ್, ಅಂತಾರಾಷ್ಟ್ರೀಯ ಯು.ಕೆ.ಫಿಟ್ನೆಸ್ ಮಾಡೆಲ್ಡಾನ್ ವೈನ್ಸ್ ಮತ್ತುಡಬ್ಲ್ಯೂಬಿಎಫ್ಎಫ್ ಪೆÇ್ರ ಮಾರ್ಗುರಿಟಾ ಅಭಿಮಾನಿಗಳಿಗೆ ಹಿಂದೆಂದೂಕಾಣದ ವಿಶೇಷ ದೇಹದಾಢ್ರ್ಯ ಪ್ರದರ್ಶನ ನೀಡಿದರು.