ಬೆಂಗಳೂರು,ಡಿ.16- ದೇಶದಾದ್ಯಂತ ಇರುವಂತಹ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸ ವಿಶ್ವದ ಅತಿದೊಡ್ಡ ಜ್ಞಾನ ಪ್ರಸರಣ ಮತ್ತು ಕೂಲಂಕುಷವಾಗಿ ಕಲಿಸುವ ಸಂಸ್ಥೆಯಾದ, ಬ್ರೈನ್ಲಿ, ಪ್ರಸ್ತುತ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿರುವ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನದಲ್ಲಿದೆ.
ಬ್ರನ್ಲಿ ಸಂಸ್ಥೆಯು ಪ್ರಮುಖ ಎಜುಟೆಕ್ ಸಂಸ್ಥೆಯಾಗಿದ್ದು, ಪ್ರತಿ ತಿಂಗಳು 100 ಮಿಲಿಯನ್ ಗೂ ಅಧಿಕ ಬಳಕೆದಾರರನ್ನು ಹೊಂದಿದೆ.ಈ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೊಷಕರನ್ನು ಒಟ್ಟುಗೂಡಿಸುತ್ತಿದೆ.ಆ ಮೂಲಕ ಅವರಲ್ಲಿ ಚರ್ಚೆ ಏರ್ಪಡಿಸಿ, ಸಮಸ್ಯೆಗಳನ್ನು ಅರ್ಥಮಾಡಿಸಿ ಅವನ್ನು ಪರಿಹರಿಸಿಕೊಳ್ಳಲು, ನೆರವಾಗಲಿದೆ.
ಈ ಬಗ್ಗೆ ಮಾತನಾಡಿದ ಬ್ರೈನ್ಲಿ ಸಂಸ್ಥೆಯ ಸಹ ಸಂಸ್ಥಾಪಕ ಮಿಷತ್ ಬ್ರೂಕೌಸ್ಕಿ , ಪ್ರಸ್ತುತ ಭಾರತದಲ್ಲಿ ನಮ್ಮ ವೇದಿಕೆಯನ್ನು ಪ್ರತಿ ತಿಂಗಳು ಸುಮಾರು 10 ಮಿಲಿಯನ್ ಬಳಕೆದಾರರು ಬಳಸಿಕೊಳ್ಳುತ್ತಿರುವುದರಿಂದ ಬ್ರೈನ್ಲಿ ಸಂಸ್ಥೆ, ಗಣನೀಯ ಪ್ರಗತಿ ದಾಖಲಿಸುತ್ತಿದೆ ಎಂದರು.
ಈ ದೇಶದ ವಿದ್ಯಾರ್ಥಿಗಳು ಮತ್ತು ಅವರ ಪೊಷಕರಿಗೆ ಶಿಕ್ಷಣಕ್ಕೆ ಇರುವ ಮಹತ್ವ ಎಂಥದ್ದು, ಅದರಿಂದಾಗು ಪ್ರಯೋಜನಗಳೇನು ಎಂಬ ಬಗ್ಗೆ ಅರಿವಿದೆ. ಹೀಗಾಗಿ ಅವರು, ಗುಣಮಟ್ಟದ ಕಲಿಕೆಗಾಗಿ ಉತ್ತಮ ವಿಧಾನಗಳ ಬಗ್ಗೆ ಎದುರು ನೋಡುತ್ತಾರೆ.
ಈ ದೇಶದಲ್ಲಿ ಕೈಗೆಟುಕುವ ದರಕ್ಕೆ ಶಿಕ್ಷಣ ದೊರೆಯಬೇಕಿದೆ. ಕೂಲಕುಂಷವಾಗಿ ವಿದ್ಯೆ ಕಲಿಸುವ ಉದ್ದೇಶದಿಂದ, ನಮ್ಮ ಸಂಸ್ಥೆಯ ಶಿಕ್ಷಣ ವಿಧಾನವು ಉಚಿತ ಮತ್ತು ಗುಣಮಟ್ಟದ್ದಾಗಿದೆ. ಹೀಗಾಗಿ ನಮ್ಮ ಈ ಶೈಕ್ಷಣಿಕ ಸಹಾಯವನ್ನು ದೇಶದಾದ್ಯಂತ ವಿಸ್ತರಿಸುವ ಗುರಿಇಟ್ಟುಕೊಂಡಿದ್ದೇವೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಒಟ್ಟಿನಲ್ಲಿ ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಇಟ್ಟುಕೊಂಡಿದೆ.ಪ್ರೈವೇಟ್ ಟ್ಯೂಷನ್ ಗಳಿಗಿಂತ, ಕೂಲಕುಂಷವಾಗಿ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಮುಂದಾಗಿದೆ.ಭಾರತದಲ್ಲೂ ಇಂತಹ ಶಿಕ್ಷಣ ವಿಧಾನಕ್ಕೆ ಹೆಚ್ಚಿನ ಮಟ್ಟದ ಆದ್ಯತೆ ನೀಡಲಾಗುತ್ತಿದೆ.