ವಾಷಿಂಗ್ಟನ್: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ರೀತಿಯ ಕೇಂದ್ರೀಯ ಬ್ಯಾಂಕ್‍ಗಳಿಗೆ ಕಾರ್ಯನಿರ್ವಹಣೆ ಸ್ವಾತಂತ್ರ್ಯ ನೀಡಬೇಕೆಂದು ಸಲಹೆ ಮಾಡಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅವುಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಇದು ಬಹು ಮುಖ್ಯ ಎಂದು ಅಭಿಪ್ರಾಯಪಟ್ಟಿದೆ.
ಆರ್‍ಬಿಐ ಗೌರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜೀನಾಮೆ ಮತ್ತು ಅದಕ್ಕೂ ಹಿಂದಿನ ವಿದ್ಯಮಾನಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಐಎಂಎಫ್ ನಿರ್ದೇಶಕ (ಸಂವಹನ) ಜೇರಿ ರೈಸ್, ಇಂಥ ಬ್ಯಾಂಕುಗಳ ಸ್ವಾತಂತ್ರ್ಯ ಕಾರ್ಯನಿರ್ವಹಣೆಗೆ ಮುಕ್ತ ಅವಕಾಶ ನೀಡಬೇಕೆಂಬುದು ತಮ್ಮ ಸಲಹೆ. ಅಂತಾರಾಷ್ಟ್ರೀಯ ಅನುಭವಗಳ ಹಿನ್ನೆಲೆಯಲ್ಲಿ ಇದು ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿದೆ ಎಂದರು.
ಆರ್‍ಬಿಐನಂಥ ಸೆಂಟ್ರಲ್ ಬ್ಯಾಂಕುಗಳಿಗೆ ಕಾರ್ಯನಿರ್ವಹಣಾ ಸ್ವಾತಂತ್ರ್ಯ ನೀಡಿದಾಗ, ಅವು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ರೈಸ್ ಹೇಳಿದರು.
Operational Independence of Central Banks Important for Carrying Out Responsibilities: IMF(International Monetary Fund)