ಬೆಂಗಳೂರು, ಡಿ.14-ಪಶ್ಚಿಮ ವಿಭಾಗದ ಚಂದ್ರಾಲೇಔಟ್ ಮತ್ತು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ 20 ಲಕ್ಷ ಬೆಲೆಬಾಳುವ 250 ಗ್ರಾಂ ತೂಕದ ಚಿನ್ನಾಭರಣ, 3 ಕೆಜಿ ಬೆಳ್ಳಿ ಸಾಮಾನು, 3ದ್ವಿಚಕ್ರ ವಾಹನಗಳು ಹಾಗೂ 11,500 ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.
ಗಂಗೊಂಡನಹಳ್ಳಿ ವಾಸಿ ಸೈಯ್ಯದ್ ಮುಜಾಹಿದ್ ಅಲಿಯಾಸ್ ಸೈಲೆಂಟ್, ಅರ್ಬಾಜ್ಖಾನ್ ಅಲಿಯಾಸ್ ಗಿಡ್ಡ (19), ಉಮರ್ ಫಾರೂಕ್(19) ಬಂಧಿತ ಆರೋಪಿಗಳು.
ಚಂದ್ರಾಲೇಔಟ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 3.50ಲಕ್ಷ ರೂ.ಬೆಲೆಯ 3 ದ್ವಿಚಕ್ರವಾಹನ, 3 ಮೊಬೈಲ್ಮತ್ತು 11,500 ನಗದು ವಶಪಡಿಸಿಕೊಂಡಿದ್ದಾರೆ.
ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಮೂಲತಃ ರಾಮನಗರತಾಲೂಕು, ಬಿಡದಿ ಹೋಬಳಿ, ಹಂಪಾಪುರ ನಿವಾಸಿ ಪ್ರಕಾಶ್.ಬಿ ಅಲಿಯಾಸ್ ಜಂಗ್ಲಿ ಅಲಿಯಾಸ್ ರವಿಕುಮಾರ್(30) ಎಂಬಾತನನ್ನು ಬಂಧಿಸಿದ್ದಾರೆ.
ಈತನಿಂದ 9 ಕನ್ನಗಳವು ಪ್ರಕರಣಗಳಿಗೆ ಸಂಬಂಧಿಸಿದ 16.50 ಲಕ್ಷ ಬೆಲೆಯ 520 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಹಳೆಯ ಆರೋಪಿಯಾಗಿದ್ದು, ಜೈಲಿಗೆ ಹೋಗಿ ಬಂದಿದ್ದರೂ ಮತ್ತೆ ಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ.ಈತನ ವಿರುದ್ಧ 40 ಕಳವು ಪ್ರಕರಣಗಳು ದಾಖಲಾಗಿವೆ.