ಬೆಳಗಾವಿ, ಡಿ.13- ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲೇಬೇಕು.ಅವರು ನಮ್ಮ ದಾರಿಗೆ ಬರಲೇಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮಯ ಹತ್ತಿರವಾಗಿದೆ.ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ.ಅವರು ರೈತರ ಸಾಲ ಮನ್ನಾ ಮಾಡಲೇಬೇಕಾಗಿದೆ.ನಮ್ಮ ದಾರಿಯಲ್ಲೇ ಅವರು ಹೋಗಬೇಕಾಗಿದೆ.ತಡವಾಗಿಯೇ ಆದರೂ ರೈತರ ಸಮಸ್ಯೆ ಅರ್ಥವಾಗಿದೆ ಎಂದು ಹೇಳಿದರು.
ರಾಜಸ್ತಾನ, ಮಂಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ, ತೆಲಂಗಾಣ ಐದೂ ರಾಜ್ಯಗಳಲ್ಲಿ ಬಿಜೆಪಿಗೆ ಹೀನಾಯ ಸೋಲುಂಟಾಗಿದೆ.ಕಾಂಗ್ರೆಸ್ ಅಲ್ಲಿ ರೈತರ ಸಾಲ ಮನ್ನಾ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಗೆಲುವಾಗಿದೆ.
ಈ ಹಿನ್ನೆಲೆಯಲ್ಲಿ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಜನರ ಮುಂದೆ ಹೋಗಲು ಸುಮಾರು 4.50 ಲಕ್ಷ ಕೋಟಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ ಎಂಬ ಮಾಹಿತಿಗೆ ಪ್ರತಿಕ್ರಿಯಿಸಿದ ಸಿಎಂ, ಪ್ರಧಾನಿ ಮೋದಿ ಅವರು ಸಾಲ ಮನ್ನಾ ಮಾಡಲೇಬೇಕಾಗಿದೆ ಎಂದರು.