ಬೆಳಗಾವಿ(ಸುವರ್ಣಸೌಧ), ಡಿ.13- ಸಣ್ಣ ನೀರಾವರಿ ಇಲಾಖೆಗೆ ಒದಗಿಸಲಾಗಿರುವ 2100 ಕೋಟಿ ರೂ.ಗಳಲ್ಲಿ ಇನ್ನು 800 ಕೋಟಿ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಸಮಗ್ರ ಮಾಹಿತಿ ಆಧರಿಸಿ ಹೇಳುವುದಾರೆ 2017-18ನೇ ಸಾಲಿನಲ್ಲಿ ಇಲಾಖೆಗೆ 2100 ಕೋಟಿ ಅನುದಾನ ಒದಗಿಸಲಾಗಿದೆ. ಆದರೆ ಈವರೆಗೂ 1200 ಕೋಟಿ ಮಾತ್ರ ಖರ್ಚಾಗಿದೆ.ಆರ್ಥಿಕ ವರ್ಷ ಬಾಕಿ ಇರುವುದು ಕೇವಲ ಮೂರು ತಿಂಗಳು ಅಷ್ಟರಲ್ಲಿ ಉಳಿದ 800 ಕೋಟಿ ಖರ್ಚಾಗಲಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಸರ್ಕಾರ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಲಿದೆ ಎಂದು ಭರವಸೆ ನೀಡಿದರು.