ರಾಜ್ಯಾದ್ಯಂತ ಜಾರಿಯಾಗಿರುವ ವಿದ್ಯುತ್ ಲೋಡ್‍ಶೆಡ್ಡಿಂಗ್

ಬೆಂಗಳೂರು, ಡಿ.11- ರಾಜ್ಯಾದ್ಯಂತ ಅಘೋಷಿತ ವಿದ್ಯುತ್ ಲೋಡ್‍ಶೆಡ್ಡಿಂಗ್ ಜಾರಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಬೆಳಗ್ಗೆ ಹಾಗೂ ಸಂಜೆ ತಲಾ ಒಂದು ಗಂಟೆ ವಿದ್ಯುತ್ ಕಡಿತ ಮತ್ತು ಉಳಿದ ಮಹಾನಗರಗಳಲ್ಲಿ ದಿನಕ್ಕೆ ಒಂದು ಗಂಟೆ ವಿದ್ಯುತ್ ಲೋಡ್‍ಶೆಡ್ಡಿಂಗ್ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕೇಳಿದರೆ ಅಧಿಕಾರಿಗಳು ರಿಪೇರಿ ನೆಪ ಹೇಳುತ್ತಾರೆ. ಡಿಸೆಂಬರ್‍ನಲ್ಲಿ ಈ ಪರಿಸ್ಥಿತಿ ಉಂಟಾದರೆ ಇನ್ನು ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂದು ಜನರು, ರೈತಾಪಿ ವರ್ಗ ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಉತ್ಪಾದನೆ ವಿಷಯದಲ್ಲಿ ಸ್ವಾವಲಂಬಿ ಜತೆಗೆ ವಿದ್ಯುತ್ ಮಾರುವಷ್ಟು ನಮಗೆ ಶಕ್ತಿ ಬಂದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಯಾಗಿರುವುದು ಸತ್ಯ. ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು.

ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂಬ ಆಶ್ವಾಸನೆ ನೀಡಿತ್ತು. ಆದರೆ, ಬೆಳಗ್ಗೆ- ಸಂಜೆ ಪೀಕ್ ಹವರ್‍ಗಳಲ್ಲಿ ವಿದ್ಯುತ್ ಕಡಿತಗೊಳಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಸಮಯ ವಿದ್ಯುತ್ ಕಡಿತವಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ