ಬೆಂಗಳೂರು, ಡಿ.8- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ ಹಾಗೂ ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಸಂಜೆ ಹೆಣ್ಣೂರು ಬಂಡೆ ಸಮೀಪ ಬೈರವೇಶ್ವರ ಬಡಾವಣೆಯ ಕವಿಸರ್ವಜ್ಞ ವೇದಿಕೆಯಲ್ಲಿ ಕನ್ನಡ ಸಂಸ್ಕøತಿ ಸಂಭ್ರಮ ಆಯೋಜಿಸಲಾಗಿದೆ.
ಜಾನಪದ ಕಲಾ ಮೇಳಕ್ಕೆ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡುವರು. ಕನ್ನಡ ಜಾಗೃತಿ ಅಭಿಯಾನಕ್ಕೆ ಸಚಿವ ಆರ್.ಶಂಕರ್ ಚಾಲನೆ ನೀಡುವರು. ಮಾಧ್ಯಮ ಪ್ರಶಸ್ತಿ ಪ್ರದಾನವನ್ನು ಸಂಸದ ಪಿ.ಸಿ.ಮೋಹನ್, ಕ್ರೀಡಾ ಪ್ರಶಸ್ತಿಯನ್ನು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಪ್ರದಾನ ಮಾಡುವರು.
ದಂಡು ಪ್ರದೇಶದಲ್ಲಿ ಕನ್ನಡ ಅಭಿವೃದ್ಧಿ ಕುರಿತು ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡುವರು. ಪತ್ರಕರ್ತ ರವೀಂದ್ರಭಟ್ ದೇಗುಲ ದರ್ಶನ ಉದ್ಘಾಟನೆ ಮಾಡುವರು. ಇದೇ ವೇಳೆ ಕೆಂಗೇರಿ ಚಕ್ರಪಾಣಿ ಅವರು ಸಂಗ್ರಹಿಸಿರುವ ಕರ್ನಾಟಕ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಎಚ್.ಎಂ.ನುನೇಗೌಡ (ಮೈಕೋ) ಸ್ಮರಣಾರ್ಥ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗುವುದು. ಶಾಸಕ ಬೈರತಿ ಸುರೇಶ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರಮೇಶ್‍ಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಿ.ಎಸ್.ಗಿರೀಶ್‍ಪಟೇಲ್ ಮತ್ತಿರರರು ಭಾಗವಹಿಸುವರು.
ಇಂದು ಸಂಜೆ ಜಾನಪದ ಕಲಾ ತಂಡಗಳನ್ನೊಳಗೊಂಡ ಅದ್ಧೂರಿ ಕನ್ನಡ ಜಾಗೃತಿ ಮೆರವಣಿಗೆ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ವಿತರಣೆ, ಸರ್ಕಾರಿ ಶಾಲೆ ಮಕ್ಕಳಿಗೆ ವಸ್ತ್ರಗಳ ವಿತರಣೆ ಜತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜಿಸಲಿವೆ.