ಬೆಂಗಳೂರು, ಡಿ.8- ಚುನಾವಣಾ ಪ್ರಚಾರದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸೋನಿಯಾ ಗಾಂಧಿ ಅವರನ್ನು ವಿಧವೆ ಎಂದು ಪರೋಕ್ಷವಾಗಿ ಲೇವಡಿ ಮಾಡಿ ತಮ್ಮ ಘನತೆಗೆ ಕುಂದು ತಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಪ್ರಧಾನಿ ತಮ್ಮ ಸ್ಥಾನದ ಗಾಂಭೀರ್ಯತೆ ಅರಿತು ಮಾತನಾಡಬೇಕು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಇದೆ ರೀತಿ ಮಾತಾನಾಡುತ್ತಿದ್ದರು. ಅಮೇಲೂ ಬದಲಾಗಿಲ್ಲ. ಅವಧಿ ಮುಗಿಯುತ್ತಾ ಬಂದರೂ ಅದೇ ರೀತಿ ಮಾತನಾಡುತ್ತಿದ್ದಾರೆ. ಇದು ಖಂಡನೀಯ.
ಸೋನಿಯಾ ಗಾಂಧಿ ವಿಧವೆಯಾಗಿದ್ದು ಯಾಕೆ ಎಂದು ದೇಶಕ್ಕೆ ಗೋತ್ತಿದೆ. ದೇಶಕ್ಕಾಗಿ ಯಾವುದೇ ಬಲಿದಾನ ಮಾಡದ ಸಂಘಟನೆಯಿಂದ ಬಂದ ಮೋದಿ ಅವರು ಸೋನಿಯಾ ಗಾಂಧಿ ಅವರ ಬಗ್ಗೆ ಹಗುರವಾಗಿ ಮಾತನಾಡಿ ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.