ಬೆಂಗಳೂರು, ಡಿ.7- ಗೊಂಜುರಾಯು ಕರಾಟೆ ಡು ರಿಮೇನಿ ಇಂಡಿಯಾ ಸಂಸ್ಥೆಯಿಂದ ತರಬೇತಿ ಪಡೆದ ಕರಾಟೆ ವಿದ್ಯಾರ್ಥಿಗಳು 2019ರ ಮಲೇಷಿಯಾದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ನಮ್ಮಗೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ಮತ್ತು ತರಬೇತುದಾರ ಸಿ.ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ 16 ದೇಶಗಳು ಭಾಗವಹಿಸಿದ್ದು, ನಮ್ಮ ಸಂಸ್ಥೆಯಿಂದ 7ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ ಎಂದರು.
ವಿಜೇತರಿಗೆ ಚಿನ್ನ ಮತ್ತು ಬೆಳ್ಳಿ ಪದಕ ನೀಡಲಾಗಿದೆ ಎಂದ ಅವರು, ನಮ್ಮ ಸಂಸ್ಥೆ ಚಿಕ್ಕದಾದರೂ ಸಹ ಕರ್ನಾಟಕದ ಹಲವೆಡೆ ತನ್ನ ಶಾಖೆಗಳನ್ನು ಸ್ಥಾಪಿಸಿ ಕರಾಟೆ ತರಬೇತಿ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಸುಮಾರು ಮೂರು ಸಾವಿರದಿಂದ ಐದು ಸಾವಿರದವರೆಗೂ ವಿದ್ಯಾರ್ಥಿಗಳನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಸಂಸ್ಥೆಗೆ ರಾಜ್ಯ ಮತ್ತು ರಾಷ್ಟ್ರಕ್ಕೆ ಗೌರವ ತಂದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಜೇತರಾದ ಎಂ.ದ್ರುಪದ, ಚೌಡಪ್ಪ, ಲಕ್ಷ್ಮಣ, ಅಭಯ್.ಸಿದ್ದಾಂತ್, ಅತ್ರಿಯೇ ನೀಲ್ ಕುಲಕರ್ಣಿ, ಮುನಿರಾಜು ಉಪಸ್ಥಿತರಿದ್ದರು.