ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ಬೆಂಗಳೂರು, ಡಿ.6- ಕಳಸಾ ಬಂಡೂರಿ ಯೋಜನೆಯ ತೀರ್ಪು ಬಂದಿದ್ದರೂ ಸರ್ವಪಕ್ಷ ಸಭೆ ಕರೆದಿಲ್ಲ. ಕೃಷ್ಣ ಯೋಜನೆಯಡಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ಸರ್ಕಾರ ಚಕಾರ ವೆತ್ತುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಇಂದು ನಡೆದ ಸಭೆಯಲ್ಲಿ ಕಳಸಾ ಬಂಡೂರಿ, ಕಾವೇರಿ, ಕೃಷ್ಣ ಯೋಜನೆ ಬಗ್ಗೆ ಚರ್ಚೆಯಾಗಿದೆ.ಕೃಷ್ಣ ಯೋಜನೆ ಬಿಸ್ಕೀಮ್ ಬಗ್ಗೆ ಪ್ರಸ್ತಾಪಿಸಿದ್ದೇನೆ. ಡ್ಯಾಮನ್ನು 526 ಮೀಟರ್‍ಗೆ ಎತ್ತರಿಸಬೇಕು.233 ಗ್ರಾಮಗಳು ಮುಳುಗಡೆಯಾಗುತ್ತವೆ. ಅದಕ್ಕೆ 50ಸಾವಿರ ಕೋಟಿ ಖರ್ಚಾಗಲಿದೆ.ಕೊಪ್ಪಳ ಏತ ನೀರಾವರಿ ಯೋಜನೆ ಕಾರ್ಯಗತವಾಗಿಲ್ಲ. ಗದಗ, ರೋಣ ಭಾಗದ ಕೆರೆ ನೀರು ತುಂಬಿಸುವ ಯೋಜನೆಯೂ ಆಗುತ್ತಿಲ್ಲ ಎಂದು ಆರೋಪಿಸಿದರು.

ಬೆಣ್ಣೆ ಹಳ್ಳ, ತುಪಣಿ ಹಳ್ಳ ಪ್ರವಾಹದ ಬಗ್ಗೆ ತಿಳಿಸಿದ್ದೆವೆ. ಪ್ರವಾಹ ತಡೆಯುವ ಕುರಿತಂತೆ ಸಮಿತಿ ರಚಿಸಿ ನೀಡಿರುವ ವರದಿ ಬಗ್ಗೆಯೂ ಗಮನ ಹರಿಸಿಲ್ಲ ಎಂದು ದೂರಿದರು.

ನೂರಾರು ಹಳ್ಳಿಗಳಿಗೆ ತೆರಳಿ ಬರ ಅಧ್ಯಯನ ನಡೆಸಿದ್ದೇವೆ. ಮೇವು ಪೂರೈಕೆ ಆಗಿಲ್ಲ. ಹೀಗಾಗಿ ಹೈದರಾಬಾದ್ ಕರ್ನಾಟಕ ಭಾಗದ ಜನ ಗುಳೆ ಹೊರಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ನಾಪತ್ತೆಯಾಗಿದ್ದಾರೆ. ಕನಿಷ್ಠ ಗೋ ಶಾಲೆ ತೆರೆಯಬೇಕಿತ್ತು ಅದು ಆಗಿಲ್ಲ. ಮುಖ್ಯಮಂತ್ರಿಗಳ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಭರವಸೆ ಕೊಟ್ಟಿದ್ದಾರೆ.ಆದರೆ, ಎಲ್ಲೂ ಕೂಡ ಸಾಲ ಮನ್ನ ಆದ ಬಗ್ಗೆ ಉದಾಹರಣೆಯೇ ಇಲ್ಲ. 43 ಲಕ್ಷ ರೈತರೂ ಒಬ್ಬರಿಗೂ ಋಣಮುಕ್ತ ಪತ್ರ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಬೆಳಗಾವಿಯಲ್ಲಿ ರೈತರ ಬೃಹತ್ ರ್ಯಾಲಿ ನಡೆಸುತ್ತೇವೆ. ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡುತ್ತ್ತೇನೆ ಎಂದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ