ಬೆಂಗಳೂರು, ಡಿ.5- ಪಾಲಿಕೆ ಸಿಬ್ಬಂದಿ ಪಾಸ್ ಬಳಸಿ ಬಿಬಿಎಂಪಿ ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಸಭಾಂಗಣದ ಒಳಗೆ ಬಂದ ಕಾಂಗ್ರೆಸ್ ಕಾಪೆರ್Çರೇಟರ್ ರೂಪಾ ಅವರ ಪತಿ ಲಿಂಗೇಶ್ವರ್ ಅವರನ್ನು ಇನ್ಸ್‍ಪೆಕ್ಟರ್ ಹರ್ಷವರ್ಧನ್ ಅವರು ಬಲವಂತವಾಗಿ ಹೊರಗೆ ಕಳುಹಿಸಿದ ಪ್ರಸಂಗ ನಡೆಯಿತು.
ಪಾಲಿಕೆ ಸಿಬ್ಬಂದಿ ಹೆಸರಿನಲ್ಲಿ ಪಾಸ್ ಪಡೆದು ಲಿಂಗೇಶ್ವರ್ ಒಳಗೆ ಬಂದಿದ್ದರು.ಇದನ್ನು ಕಂಡು ಇನ್ಸ್‍ಪೆಕ್ಟರ್ ಹರ್ಷವರ್ಧನ್ ಅವರು, ಲಿಂಗೇಶ್ವರ್ ಅವರನ್ನು ತಡೆದು ತರಾಟೆಗೆ ತೆಗೆದುಕೊಂಡು ನೀವು ಹೊರಹೋಗದಿದ್ದರೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಅವರಿಂದ ಪಾಸ್ ವಶಕ್ಕೆ ಪಡೆದುಕೊಂಡು ಹೊರಗೆ ಕಳುಹಿಸಿದರು.
ನಂತರ ಲಿಂಗೇಶ್ವರ್ ಪಡೆದಿದ್ದ ಪಾಸ್‍ಅನ್ನು ಕೌನ್ಸಿಲ್ ಕಾರ್ಯದರ್ಶಿಯವರಿಗೆ ಇನ್ಸ್‍ಪೆಕ್ಟರ್ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಕೋರಿದರು.