ನವದೆಹಲಿ:ಮಾ-8: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ಸಿಬಿಐ ಹೊಸದಾಗಿ ಮತ್ತೊಂದು ಎಫ್‌ಐಆರ್ ದಾಖಲಿಸಿದೆ. ಈಗಾಗಲೇ ನಿರವ್ ಮೋದಿ 12,636 ಕೋಟಿ ಹಗರಣ ಎದುರಿಸುತ್ತಿದ್ದು, ಈಗ ಮತ್ತೆ 321 ಕೋಟಿ ಪ್ರಕರಣ ದಾಖಲಾಗಿದೆ.
ಕ್ರೆಡಿಟ್ ಸೌಲಭ್ಯಗಳನ್ನು ವಿಸ್ತರಿಸಿದ್ದರಿಂದ 321 ಕೋಟಿ ನಷ್ಟವಾಗಿದೆ ಎಂದು ಮಾ. 4ರಂದು ಪಿಎನ್‌ಬಿ ಬ್ಯಾಂಕ್ ದೂರು ದಾಖಲಿಸಿತ್ತು. ದೂರಿನನ್ವಯ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ನೀರವ್ ಮೋದಿ ಹೆಸರು ಇದೆ. ಜೊತೆಗೆ ಫೈರ್‌ಸ್ಟಾರ್ ಡೈಮಂಡ್ ಅಂತಾರಾಷ್ಟ್ರೀಯ ಕಂಪನಿಯ ಅಧ್ಯಕ್ಷ ವಿಪುಲ್ ಅಂಬಾನಿ, ಮುಖ್ಯ ಹಣಕಾಸು ಅಧಿಕಾರಿ ರವಿ ಗುಪ್ತಾ, ಕಂಪನಿಯ ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನೀರವ್ ಮೋದಿ ಫೈರ್ ಸ್ಟಾರ್ ಡೈಮಂಡ್ ಕಂಪನಿ ಜೊತೆಗೂ ಸಹಭಾಗಿತ್ವ ಹೊಂದಿದ್ದಾರೆ. ಈ ಕಂಪನಿಗೆ ಮುಂಬೈನ ಬ್ರಿಡಿ ಬ್ಯಾಂಕ್ ರೋಡ್ ಬ್ರಾಂಚ್‌ನಿಂದ 2013ರಿಂದ 2017ರವರೆಗೂ ಕ್ರಿಡಿಟ್ ಸೌಲಭ್ಯ ವಿಸ್ತರಿಸಿದ್ದರಿಂದ ನಷ್ಟವಾಗಿದೆ ಎಂದು ನೀರವ್ ಮೋದಿ ವಿರುದ್ಧ ಪಿಎನ್‌ಬಿ ದೂರು ದಾಖಲಿಸಿದೆ.