ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ

ಮಂಡ್ಯ: ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ ರಮ್ಯಾ ವೀರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆದ್ರೆ ರಮ್ಯಾ ಗೈರಾಗಲು ಅಸಲಿ ಕಾರಣವೊಂದು ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

ದೇಹದಲ್ಲಿ ಸಮಸ್ಯೆಗಳಾದ್ರೆ ವ್ಯತಾಸ ಕಂಡು ಬಂದ್ರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗುತ್ತೆ. ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಅಂತ ಕಾಲಿನ ಚಿತ್ರ ಹಾಕಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಸ್ಟಿಯೋಕ್ಲ್ಯಾಟೋಮಾ ಎಂಬುದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದೀಗ ಮಾಜಿ ಸಂಸದೆ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಕಾಯಿಲೆ 10 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.

ದಿವ್ಯ ಸ್ಪಂದನ ಎಂಬ ಹುಡುಗಿ ಸ್ಯಾಂಡಲ್‍ವುಡ್‍ನಲ್ಲಿ ರಮ್ಯಾ ಆಗಿ ಬೆಳೆಯುವಲ್ಲಿ ಅಂಬಿ ಆಶೀರ್ವಾದವಿತ್ತು. ಅಲ್ಲದೇ ನಟಿಯಾಗಿದ್ದ ರಮ್ಯಾ ಮಂಡ್ಯದಲ್ಲಿ ಗೆದ್ದು ಸಂಸದೆಯಾಗಿದ್ದರು. ಆದರೆ ಅಂಬರೀಶ್ ನಿಧನಕ್ಕೆ ಕೇವಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಛೀಮಾರಿ ಹಾಕಿದ್ದರು. ಅಲ್ಲದೇ ಮಂಡ್ಯದ ಜನತೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಅಮರ್‍ನಾಥ್, ಜಲೀಲ, ಕನ್ವರ್ ಲಾಲ್, ರೆಬೆಲ್ ಸ್ಟಾರ್, ಕಲಿಯುಗ ಕರ್ಣ, ಮಂಡ್ಯದ ಗಂಡು… ಹೀಗೆ ನಾನಾ ಹೆಸರುಗಳಿಂದ ಜನಮಾನಸದಲ್ಲಿ ಅಚ್ಚೊತ್ತಿ ಅಂಬರೀಶ್ ಅಮರರಾಗಿದ್ದಾರೆ. ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಯಿತು. ರಾತ್ರಿ 10 ಗಂಟೆ ಕಳೆದರೂ ಅಂಬಿ ಅಭಿಮಾನಿಗಳು ಸ್ಟುಡಿಯೋಗೆ ಭೇಟಿ ನೀಡುತ್ತಿದ್ದರು. ಕೊನೆಗೆ ಪೊಲೀಸರು ಬ್ಯಾರಿಕೇಡ್‍ಗಳನ್ನು ತೆರೆದು ಅವಕಾಶ ಮಾಡಿಕೊಟ್ಟರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ