ಬೆಂಗಳೂರು, ನ.26-ಅಗಲಿದ ಮಂಡ್ಯದ ಗಂಡು ಅಂಬಿ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ ಕಂಠೀರವ ಸ್ಟೇಡಿಯಂ ಬಳಿ ಸಹಸ್ರಾರು ಜನ ಸೇರಿದ್ದರಾದರೂ ಅವಕಾಶ ಸಿಗದೆ ಹತಾಶರಾದರು.
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಪಾರ್ಥಿವ ಶರೀರವನ್ನು ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಕಂಠೀರವ ಕ್ರೀಡಾಂಗಣಕ್ಕೆ ತಂದಾಗ ಅಂತಿಮ ದರ್ಶನ ಪಡೆಯಲು ಸಾವಿರಾರು ಜನ ನೆರೆದಿದ್ದರು. ಆದರೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಸಿಗಲಿಲ್ಲ.
ಕಲಾವಿದರು, ವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಿ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಯಿತು. ಚಿತ್ರ ನಟರಾದ ದರ್ಶನ್, ಜಗ್ಗೇಶ್, ತೆಲಗು ನಟರಾದ ಕೃಷ್ಣಂರಾಜ್, ವಿಜಯ್ಶಂಕರ್, ಕಾಂಗ್ರೆಸ್ ಮುಖಂಡರಾದ ಗುಲಾಬ್ನಭಿ ಆಜಾದ್, ಕೆ.ಸಿ.ವೇಣುಗೋಪಾಲ್ ಮುಂತಾದವರು ಅಂತಿಮ ದರ್ಶನ ಪಡೆದರು.
ಉಳಿದಂತೆ ಕಲಾವಿದರು, ಕನ್ನಡಪರ ಸಂಘಟನೆಗಳ ಮುಖಂಡರಿಗೆ ಅವಕಾಶ ನೀಡಲಾಯಿತು. ಸಾರ್ವಜನಿಕರಿಗೆ ಅವಕಾಶ ನಿರ್ಬಂಧಿಸಿ ಪೆÇಲೀಸ್ ಸರ್ಪಗಾವಲಿನಲ್ಲಿ ಅಂತಿಮ ಯಾತ್ರೆ ಪ್ರಾರಂಭಿಸಲಾಯಿತು.
ಹೂವಿನಿಂದ ಅಲಂಕೃತಗೊಂಡ ವಿಶೇಷ ವಾಹನದಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಕೊಂಡೊಯ್ಯಲಾಯಿತು.
ಕನ್ನಡದ ಧ್ವಜವನ್ನಿಡಿದ ಅಭಿಮಾನಿಗಳು ಮೆರವಣಿಗೆ ಮುಂದೆ ಸಾಗಿ ಅಂಬಿ ಪರ ಘೋಷಣೆಗಳನ್ನು ಕೂಗುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ ಕೈಮುಗಿದು ಅಂಬರೀಶ್ ಅವರಿಗೆ ಅಂತಿಮ ವಿದಾಯ ಹೇಳುತ್ತಿದ್ದದ್ದು ಕಂಡು ಬಂತು.
ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರಾದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೆÇಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರು. ರಸ್ತೆ ಯುದ್ದಕ್ಕೂ ಅಂಬರೀಶ್ ಅಮರ್ ರಹೇ…ಹೈ , ಅಣ್ಣಾ ಮತ್ತೊಮ್ಮೆ ಹುಟ್ಟಿ ಬಾ, ಅಂಬರೀಶ್ಗೆ ಜಯವಾಗಲಿ ಎಂಬ ಘೋಷಣೆಗಳು ಕೇಳಿ ಬಂದವು.
ಟ್ರಾಫಿಕ್ ಜಾಮ್ ಆಗುವ ಮುನ್ನೆಚ್ಚರಿಕೆ ವಹಿಸಿದ್ದ ಸಂಚಾರಿ ಪೆÇಲೀಸರು ಪಾರ್ಥಿವ ಶರೀರ ಕೊಂಡೊಯ್ಯುವ ವಾಹನದ ಹಿಂದೆ ಖಾಸಗಿ ವಾಹನಗಳು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಸಂಬಂಧಿಕರು, ಕಲಾವಿದರು ಹಾಗೂ ಮಾಧ್ಯಮದವರ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಕಂಠೀರವ ಸ್ಟೇಡಿಯಂನಿಂದ ಹಡ್ಸನ್ ಸರ್ಕಲ್ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ಹಲಸೂರು ಗೇಟ್ ಪೆÇಲೀಸ್ ಠಾಣೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಜಿ.ರೋಡ್ ಮಾರ್ಗವಾಗಿ ಪ್ಯಾಲೇಸ್ರೋಡ್, ಸಿಐಡಿ ಜೆಂಕ್ಷನ್, ಬಸವೇಶ್ವರ ಸರ್ಕಲ್, ಹೋಲ್ಡ್ ಹೈಗ್ರೌಂಡ್ಸ್ ಪೆÇಲೀಸ್ ಠಾಣೆ, ವಿಂಡ್ಸನ್ಮ್ಯಾನರ್ ಜಂಕ್ಷನ್, ಯಶವಂತಪುರ, ಕಾವೇರಿ ಜಂಕ್ಷನ್ನಿಂದ ಭಾಷ್ಯಂ ಸರ್ಕಲ್, ಸ್ಯಾಂಕಿಕೆರೆ, ಮಾರಮ್ಮ ಸರ್ಕಲ್ ಮಾರ್ಗವಾಗಿ ಯಶವಂತಪುರ ಫ್ಲೈಓವರ್ ಮೂಲಕ ಗೊರಗುಂಟೆ ಪಾಳ್ಯ ಮಾರ್ಗ, ಎಪಿಎಂಸಿಯಾರ್ಡ್ ಮೂಲಕ ಸುಮಾರು 13 ಕಿ.ಮೀ. ಸಾಗಿದ ಮೆರವಣಿಗೆ ಅಂತ್ಯ ಸಂಸ್ಕಾರ ನೆರವೇರುವ ಕಂಠೀರವ ಸ್ಟುಡಿಯೋ ಆವರಣ ತಲುಪಿತು.