ಬೆಂಗಳೂರು,ನ.25–ರೆಬೆಲ್ ಸ್ಟಾರ್ ಎನ್ನುವ ಪಟ್ಟ ಹಿರಿಯ ನಟ ಅಂಬರೀಶ್ಗೆ ಸುಮ್ಮನೆ ಬಂದಿದ್ದಲ್ಲ. ಇಂದಿಗೂ ಅಂಬಿ ಒಂದು ಗುಟುರು ಹಾಕಿದ್ರೆ ಇಡೀ ವಾತಾವರಣ ಸೈಲೆಂಟ್ ಆಗುತ್ತೆ. ಅಂಬಿ ಇತ್ತೀಚೆಗಷ್ಟೇ ಒಂದು ಖಡಕ್ ಆವಾಜ್ ಹಾಕಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಕೆಲಸ ಮಾಡಬೇಕು ಎನ್ನುವುದು ಬಹುತೇಕರ ಕನಸು. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಮೂಲಕ ನಿರ್ದೇಶಕ ಗುರುದತ್ ಅಂಬಿ ಜೊತೆ ಕೆಲಸ ಮಾಡೋ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದರು.
ಸಖತ್ ಎನರ್ಜೆಟಿಕ್ ಆಗಿ ಅಂಬರೀಶ್ ಈ ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು.ಆದ್ರೆ ಒಂದು ಶಾಟ್ನಲ್ಲಿ ಒಂದೇ ಟೇಕ್ನಲ್ಲಿ ಲಾಂಗ್ ಶಾಟ್ ತೆಗೀಬೇಕು ಅಂತ ತಾಕೀತು ಮಾಡಿದ್ದರು.
ಅಂದಹಾಗೆ ಅದೊಂದು ಇಂಪಾರ್ಟೆಂಟ್ ಸೀನ್. ಸಾಕಷ್ಟು ಉದ್ದವಿದ್ದ ಸೀನ್ನನ್ನು ಎರಡು ಭಾಗಗಳಲ್ಲಿ ಮಾಡೋ ಪ್ಲಾನ್ ಮಾಡಿತ್ತು ಚಿತ್ರತಂಡ.ಆದ್ರೆ ಸ್ಕ್ರಿಪ್ಟ್ ಓದಿದ ಅಂಬಿ ತಾವದನ್ನು ಒಂದೇ ಶಾಟ್ನಲ್ಲಿ ಕೊಡೋದಾಗಿ ಹೇಳಿಬಿಟ್ರು.
ಅಷ್ಟೇ ಅಲ್ಲ, ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಕಟ್ ಹೇಳಬಾರದು ಎಂದು ತಾಕೀತು ಸಹ ಮಾಡಿದ್ರು.ಒಂದು ವೇಳೆ ಕಟ್ ಹೇಳಿದ್ರೆ ಸುಮ್ನಿರೋದಿಲ್ಲ ಎಂದು ಆವಾಜ್ ಕೂಡಾ ಹಾಕಿದ್ರು.
ಅಂಬರೀಶ್ ಹೇಳಿದ್ಮೇಲೆ ಮುಗಿದೇ ಹೋಯ್ತು.ಕಟ್ ಹೇಳದೇ ಇಡೀ ಸೀನ್ ಸೂಪರ್ ಆಗಿ ಚಿತ್ರೀಕರಣ ಮಾಡಲಾಗಿತ್ತು.ಅಂಬಿ ಜೊತೆಗಿನ ಈ ಗೋಲ್ಡನ್ ಮೂಮೆಂಟ್ಸ್ನ್ನು ಚಿತ್ರತಂಡ ಸಖತ್ ಎಂಜಾಯ್ ಮಾಡಿತ್ತು ಸಹ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ, ಶೃತಿ ಹರಿಹರನ್ ಮುಂತಾದವರು ನಟಿಸಿದ್ದರು.ಗುರುದತ್ ಈ ಚಿತ್ರದ ನಿರ್ದೇಶನ ಮಾಡಿದ್ದರು.