ರೈತರು ಮತ್ತು ಮಹಿಳೆಯರ ನಿಂದನೆ, ಸಿ.ಎಂ. ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

ಬೆಂಗಳೂರು,ನ.22- ಮುಖ್ಯಮಂತ್ರಿಯವರು ರೈತರನ್ನು ಮತ್ತು ಮಹಿಳೆಯನ್ನು ನಿಂದಿಸಿರುವ ಕಾರಣ ಮನನೊಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕರ್ನಾಟಕ ಕಲ್ಯಾಣ ಪ್ರತಿಷ್ಠಾನ ಅಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯೂನಿರ್ವಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್ ಪ್ರಕಾರ ಎಲ್ಲ ಮಾನವ ಜೀವಿಗಳು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸ್ವತಂತ್ರರು ಯಾರನ್ನೇ ಆಗಲಿ ನೋಯಿಸುವ ಹಕ್ಕು ಯಾವ ವ್ಯಕ್ತಿಗೂ ಇರುವುದಿಲ್ಲ ಎಂದರು.

ಮುಖ್ಯಮಂತ್ರಿಯಾದವರು ಎಲ್ಲರನ್ನು ಸಮನಾಗಿ ಕಾಣಬೇಕು ಮುಖ್ಯಮಂತ್ರಿಯವರ ಹೇಳಿಕೆಯಿಂದ ರೈತರಿಗೆ ಹಾಗೂ ಮಹಿಳೆಯರ ಘನತೆಗೆ , ಗೌರವಕ್ಕೆ ಧಕ್ಕೆ ಉಂಟಾಗಿದೆ.
ಹಾಗಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಮಾನವ ಹಕ್ಕುಗಳ ಆಯೋಗ , ಕರ್ನಾಟಕ ಮಹಿಳಾ ಆಯೋಗ ಪೆÇಲೀಸ್ ಮಹಾನಿರ್ದೇಶಕರಿಗೆ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ