ಬೆಂಗಳೂರು,ನ.22- ಕನಕ ಜಯಂತಿ ಅಂಗವಾಗಿ ಧಾರವಾಡದ ಮನಸೂರಿನ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದ ವಿದ್ಯಾಪೀಠದ ಆಶ್ರಯದಲ್ಲಿ ನ.24ರಿಂದ 28ವರೆಗೆ ಕನಕ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭವನ್ನು ಮಹಾಮಠ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಧಾರ್ಮಿಕ, ಶೈಕ್ಷಣಿಕ , ಸಾಹಿತ್ಯಿಕ, ಸಾಮಾಜಿಕ, ಉದ್ದಿಮೆ, ಕೃಷಿ, ಕ್ರೀಡೆ, ರಂಗಭೂಮಿ, ಮಹಿಳಾ ಮತ್ತು ಮಕ್ಕಳು, ಸ್ವಾತಂತ್ರ್ಯ ಯೋಧರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಕನಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ರೇವಣ್ಣಸಿದ್ದೇಶ್ವರ ಮಠದ ಬಸವರಾಜದೇವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ ನ್ಯಾಯ ಮತ್ತು ರಾಜೀನೀತಿಯಲ್ಲಿ ಶಾಸಕ ಸಿ.ಎಸ್.ಶಿವಳ್ಳಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ವೈ.ಎಂ.ಯಾಕೊಳ್ಳಿ, ಮೋಹನ ನಾಗಮ್ಮ, ಡಾ.ಕೆ.ಜಿ.ಪರಶುರಾಮ, ಚಳುವಳಿ ಕ್ಷೇತ್ರದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೂಡು, ಆಡಳಿತ ಕ್ಷೇತ್ರದಲ್ಲಿ ಬೆಂಗಳೂರು ಬಿಡಿಎ ಕಾರ್ಯದರ್ಶಿ ಬಸವರಾಜು ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಶಿಕ್ಷಣದ ಕ್ಷೇತ್ರದಲ್ಲಿ ಬಾದಾಮಿಯ ಕಾಳಿದಾಸ ಶಿಕ್ಷಣ ಸಂಸ್ಥೆ, ಪರಿವರ್ತನಾ ಕ್ಷೇತ್ರದಲ್ಲಿ ಹೊಳೆ ಆಲೂರಿನ ಜ್ಞಾನಸಿಂಧು ಅಂಧಮಕ್ಕಳ ವಶತಿ ಶಾಲೆಗೆ, ಸಾಮಾಜಿಕ ಕ್ಷೇತ್ರದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ , ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕರ್ನಾಟಕ ಅಹಲ್ಯಬಾಯಿ ಹೊಳ್ಕರ್ ಮಹಿಳಾ ಸಂಘ ಹಾಗೂ ಉದ್ದಿಮೆ ಕ್ಷೇತ್ರದಲ್ಲಿ ಚಿಕ್ಕನಗರಗುಂದದ ರೇವಣಸಿದ್ದೇಶ್ವರ ಕುರಿ ಸಂಗೋಪನೆ ಸಹಕಾರಿ ಸಂಘಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಉತ್ಸವ 531ನೇ ಕನಕ ಜಯಂತಿ ನಡೆಯುವ ಕನಕ ಪಂಚಮಿ ಸಾಂಸ್ಕøತಿಕ ಉತ್ಸವದಲ್ಲಿ ಭಾಗವಹಿಸುವ ಜಾನಪದ ಕಲಾತಂಡಗಳು ನವೆಂಬರ್ 27 ಮತ್ತು 28ರಂದು ಹೆಸರು ನೋಂದಾಯಿಸಕೊಳ್ಳಬೇಕು ಎಂದು ಹೇಳಿದರು.
ನ.26ರಂದು ಕನಕ ಕವಿಗೋಷ್ಠಿ ಆಯೋಜಿಸಲಾಗಿದ್ದು, ಕನಕದಾಸರ ಬದುಕು ಬರಹ ಒಳಗೊಂಡ ಸ್ವರಚಿತ ಕವನಗಳನ್ನು ಸಮಿತಿ ಆಹ್ವಾನಿಸಿದೆ. ಅಲ್ಲದೆ 2017-18ನೇ ಸಾಲಿನ ಪ್ರಕಟಿತ ಉತ್ತಮ ಪುಸ್ತಕಗಳಿಗೆ ಕನಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಆಸಕ್ತ ಬರಗಾರರು ತಮ್ಮ ಎರಡು ಪುಸ್ತಕಗಳನ್ನು ಅಧ್ಯಕ್ಷರು, ಶ್ರೀ ರೇವಣ್ಣ ಸಿದ್ದೇಶ್ವರ ಮಹಾಮಠ ಮನಸೂರು, ಧಾರವಾಡ-7, ಮೊ:9448923422/8073027036 ಸಂಪರ್ಕಿಸಬಹುದು ಎಂದು ವಿವರಿಸಿದರು.