ಸುಳ್ಳು ವಿಳಾಸ ನೀಡಿ ಸವಲತ್ತು ಪಡೆಯುವ ಆಗತ್ಯವಿಲ್ಲ, ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿಕೆ

ಬೆಂಗಳೂರು,ನ.22- ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪ್ರಯಾಣ ಭತ್ಯೆ, ದಿನಭತ್ಯೆ ಸೇರಿದಂತೆ ಯಾವುದೇ ರೀತಿಯ ಸವಲತ್ತುಗಳನ್ನು ಪಡೆದುಕೊಂಡಿಲ್ಲ. ನನಗೆ ಸುಳ್ಳು ವಿಳಾಸ ನೀಡಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕಾದ ಅಗತ್ಯವಿಲ್ಲ. ನಾನು ಹುಟ್ಟಿದ ವಿಳಾಸ ಹೊರತುಪಡಿಸಿ ಉಳಿದೆಲ್ಲವೂ ಬಿಬಿಎಂಪಿ ವ್ಯಾಪ್ತಿಯಲ್ಲೆ ಇದೆ. ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದರೆ ತನಿಖಾಧಿಕಾರಿಗಳಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಚಾರ್, ಪೆÇಲೀಸರು ನನ್ನ ವಿರುದ್ಧ ಯಾವ ಕಾರಣಕ್ಕಾಗಿ ಎಫ್ ಐಆರ್ ದಾಖಲಿಸಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನಾನು ನಿರೀಕ್ಷಣಾ ಜಾಮೀನಿಗೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಿಲ್ಲ. ಇದುವೆರಗೂ ನನಗೆ ಠಾಣೆಯಿಂದ ನೋಟಿಸ್ ಬಂದಿಲ್ಲ. 2 ಗಂಟೆಗೆ ವಿಚಾರಣೆಗೆ ಬರಲು ಪೆÇಲೀಸರು ಹೇಳಿದ್ದಾರೆ. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರ ನೀಡಲಿದ್ದೇನೆ ಎಂದರು.

ನಾನು ಸೇರಿದಂತೆ 7 ಮಂದಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕರು ಸುಳ್ಳು ಮಾಹಿತಿ ನೀಡಿ ಸರ್ಕಾರದ ಸವಲತ್ತುಗಳನ್ನು ಪಡೆಯಲಾಗಿದೆ ಎಂದು ಆರೋಪ ಮಾಡಲಾಗಿದೆ. ನನಗೆ ಯಾವುದೇ ರೀತಿಯ ಮುಜುಗರ ಇಲ್ಲ. ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇರುವುದರಿಂದ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗಿದೆ ಎಂದು ಹೇಳಿದರು.

ನಮ್ಮ ವಿರುದ್ಧ ದೂರು ನೀಡಿರುವವರ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಎಲ್ಲಾ ಆಸ್ತಿ ಬಿಬಿಬಿಎಂಪಿ ವ್ಯಾಪ್ತಿಯಲ್ಲೇ ಇರುವುದರಿಂದ ನಾನು ಇಲ್ಲಿಯೇ ಮತದಾನದ ಹಕ್ಕು ಹೊಂದಿದ್ದೇನೆ. ಹೀಗಿರುವಾಗ ಸುಳ್ಳು ಮಾಹಿತಿ ನೀಡಬೇಕಾದಂತಹ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಆಚಾರ್ ಸಮರ್ಥಿಸಿಕೊಂಡರು.

ಮಾಜಿ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‍ನ ಸಭಾಪತಿ ಅವರು ಮೂರ್ನಾಲ್ಕು ಬಾರಿ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಈಗ ಪೆÇಲೀಸರು ಯಾವ ಕಾರಣಕ್ಕಾಗಿ ನಮ್ಮ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೋ ತಿಳಿದಿಲ್ಲ. ಇದು ರಾಜಕೀಯ ಪ್ರೇರಿತ ಪ್ರಕರಣವಾಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದರು.

ಟಿಎ, ಡಿಎಗೆ ಕ್ಲೈಮ್ ಮಾಡುವ ಅಗತ್ಯವೇ ಇರುವುದಿಲ್ಲ. ಸರ್ಕಾರವೇ ನಮ್ಮ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುತ್ತದೆ. ಸಭಾಪತಿಗಳ ನೇತೃತ್ವದಲ್ಲಿ ಪ್ರಕರಣ ಮುಗಿದಿರುವಾಗ ನಮ್ಮ ಮೇಲೆ ಯಾವ ಕಾರಣಕ್ಕಾಗಿ ವಂಚನೆ ಪ್ರಕರಣವನ್ನು ಪೆÇಲೀಸರು ದಾಖಲಿಸಿದ್ದಾರೆ ಎಂದು ಪ್ರಶ್ನಿಸಿದರು.
ಪೆÇಲೀಸರು ಏನೇ ದೂರು ದಾಖಲಿಸಿದ್ದರೂ ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ. ನಾವು ಕದ್ದುಮುಚ್ಚಿ ಓಡಿಹೋಗುವುದಿಲ್ಲ. ಭಗವಂತ ಎಲ್ಲವನ್ನೂ ಎದುರಿಸುವ ಶಕ್ತಿ ನೀಡಿದ್ದಾನೆ.ಎಲ್ಲವನ್ನು ಎದುರಿಸಲು ನಾನು ಸಿದ್ದ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲೇ ನಮ್ಮ ವಿಳಾಸಗಳಿವೆ. ಹೀಗಾಗಿ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ನಾವು ಮತದಾನದ ಹಕ್ಕು ಹೊಂದಿದ್ದೇವು. ಇದನ್ನು ಸಹಿಸಲಾರದ ನಮ್ಮ ರಾಜಕೀಯ ಎದುರಾಳಿಗಳು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಗುಡುಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ