ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ಸಧ್ಯದ ಅನಿಶ್ಚಿತತೆ ಹಾಗೂ ಅವ್ಯವಸ್ಥೆಯಿಂದ ರಾಜ್ಯವನ್ನು ರಕ್ಷಿಸಲು ಪಿಡಿಪಿಗೆ ಬೆಂಬಲ ನೀಡುತ್ತಿರುವುದಾಗಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಪಿ ಹಾಗೂ ಎನ್ ಸಿ ಮೈತ್ರಿ ಮೂಲಕ ಸರ್ಕಾರ ರಚನೆ ಮಾಡಲು ಪಾಕಿಸ್ತಾನ ನಿರ್ದೇಶನ ನೀಡಿದೆ ಎಂಬ ಬಿಜೆಪಿ ಮುಖಂಡ ರಾಮ್ ಮಾಧವ್ ಅವರ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಒಮರ್ ಅಬ್ದುಲ್ಲಾ, ಈ ಕುರಿತು ರಾಮ್ ಮಾಧವ್ ಸಾಕ್ಷ್ಯ ಒದಗಿಸಲಿ ಎಂದು ಸವಾಲು ಹಾಕಿದರು.
ಪಿಡಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವಂತೆ ಪಾಕಿಸ್ತಾನ ನಿರ್ದೇಶನ ನೀಡಿದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ರಾಮ್ ಮಾಧವ್ ಸಾಕ್ಷ್ಯ ಒದಗಿಸಲಿ ಎಂದು ಒಮಾರ್ ಅಬ್ದುಲ್ಲಾ ಸವಾಲು ಹಾಕಿದರು.
ಬಿಜೆಪಿ ನಾಯಕರ ಆರೋಪಗಳು ಖಂಡನೀಯವಾಗಿದ್ದು, ದೇಶದ ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ಕಾನ್ಫರೆನ್ಸ್ ಕಾರ್ಯಕರ್ತರ ತ್ಯಾಗವನ್ನು ಮರೆಯಲಾಗದು. ಈ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಶಾಸಕರಿಗೆ ಹಣದ ಆಮಿಷವೊಡ್ಡಲಾಗುತ್ತಿದ್ದು, ಕುದುರೆ ವ್ಯಾಪಾರ ಯತ್ನಗಳು ನಡೆಯುತ್ತಿವೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
National Conference backed PDP,save J&K from uncertainty: Omar abdullah