ಕುಣಿಗಲ್,ಮಾ.7-ಮದ್ಯಸೇವನೆಯನ್ನು ವಿರೋಧಿಸುತ್ತಿದ್ದ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿರುವ ಪ್ರತಿಷ್ಠಿತ ಕಾಲೇಜು ಇಂದು ಕುಡುಕರ ಅಡ್ಡವಾಗಿರುವುದು ದುರ್ದೈವವೇ ಸರಿ.
ಜಿಲ್ಲೆಯಲ್ಲೇ ಅತ್ಯುತ್ತಮ ಕಾಲೇಜು ಎಂದು ಪ್ರಸಿದ್ದಿ ಪಡೆದಿರುವ ಪಟ್ಟಣದ ಸರ್ಕಾರಿ ಮಹಾತ್ಮಾಗಾಂಧಿ ಕಾಲೇಜಿಗೆ ಪುಂಡುಪೆÇೀಕರಿಗಳಿಂದಾಗಿ ಕೆಟ್ಟ ಹೆಸರು ಬರುವಂತಾಗಿದ್ದರೂ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೆÇಲೀಸರು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ.
ಸರ್ಕಾರಿ ಮಹಾತ್ಮಗಾಂಧಿ ಕಾಲೇಜು ಪಟ್ಟಣದ ಕೆಆರ್ಎಸ್ ಅಗ್ರಹಾರದಲ್ಲಿದ್ದು , ಮಂಗಳೂರು-ಬೆಂಗಳೂರು ಮುಖ್ಯರಸ್ತೆಗೆ ಹೊಂದಿಕೊಂಡಂತಿದೆ. ಇಲ್ಲಿ 5ನೇ ತರಗತಿಯಿಂದ ಪಿಯುಸಿವರೆಗೆ ತರಗತಿಗಳು ನಡೆಯುತ್ತವೆ.
ನಾಗಮಂಗಲ, ಮಾಗಡಿ, ಮದ್ದೂರು, ಕುಣಿಗಲ್ ತಾಲ್ಲೂಕುಗಳು ಸೇರಿದಂತೆ ಇತರೆಡೆಯಿಂದಲೂ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಕಾಲೇಜಿಗೆ ಶತಮಾನದ ಇತಿಹಾಸವಿದೆ. ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಎಲ್ಲ ಸೌಲಭ್ಯವೂ ಇದೆ. ಉತ್ತಮ ಪೆÇ್ರಫೆಸರ್ಗಳು, ಉಪನ್ಯಾಸಕರು ಇದ್ದಾರೆ. ಉನ್ನತ ಹುದ್ದೆ ಅಲಂಕರಿಸಿದ್ದವರು ಹೈಕೋರ್ಟ್ ಜಡ್ಜ್ಗಳು ಸಹ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದು , ಅತ್ಯುತ್ತಮ ಕಾಲೇಜು ಎಂದು ಕೀರ್ತಿ ಪಡೆದಿದೆ.
ಶಾಲಾ-ಕಾಲೇಜುಗಳ ಸುತ್ತ 100 ಮೀಟರ್ವರೆಗೆ ಮಧ್ಯ, ಗುಟ್ಕಾ, ಸಿಗರೇಟ್ ಮುಂತಾದ ವಸ್ತುಗಳನ್ನು ಮಾರುವಂತಿಲ್ಲ. ಆದರೆ ಈ ಕಾಲೇಜಿಗೆ 50 ಮೀಟರ್ ಅಂತರದಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ಇದೆ. ಸಮೀಪದ ಅಂಗಡಿಗಳಲ್ಲಿ ಗುಟ್ಕಾ, ಸಿಗರೇಟ್, ಪಾನ್ಪರಾಗ್ ಮತ್ತಿತರ ವಸ್ತುಗಳು ಮಾರಾಟವಾಗುತ್ತಿವೆ.
ಸಂಜೆಯಾಗುತ್ತಿದ್ದಂತೆ ಕಾಲೇಜಿನ ಮುಂಭಾಗವನ್ನೇ ಪುಂಡುಪೆÇೀಕರಿಗಳು ಅಡ್ಡೆ ಮಾಡಿಕೊಂಡು ಮಧ್ಯಸೇವನೆ ಮಾಡುತ್ತಾ ಇಲ್ಲಿ ಓಡಾಡುವ ಜನರಿಗೆ ಮುಜುಗರ ಉಂಟು ಮಾಡುತ್ತಾರೆ. ಮಧ್ಯಸೇವಿಸಿದ ಬಾಟಲ್ಗಳನ್ನು ಇಲ್ಲೇ ಮನಬಂದಂತೆ ಎಸೆದು ಗಲಾಟೆ ಮಾಡುತ್ತಾರೆ. ರಾತ್ರಿ ಗಸ್ತು ತಿರುಗುವ ಪೆÇಲೀಸರು ಇತ್ತ ತಿರುಗಿಯೂ ನೋಡುವುದಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಈ ಬಗ್ಗೆ ನಾಗರಿಕರು ಹಲವಾರು ಬಾರಿ ಪೆÇಲೀಸರಿಗೆ ಹಾಗೂ ಕಾಲೇಜಿನವರಿಗೆ ದೂರು ನೀಡಿದ್ದಾರೆ. ಆದರೂ ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೆÇಲೀಸರು ಕಣ್ಣುಮುಚ್ಚಿ ಕುಳಿತಿದ್ದಾರೆ.
ಕಾಲೇಜಿಗೆ ಕೂಗಳತೆಯ ದೂರದಲ್ಲಿ ಪೆÇಲೀಸ್ ಠಾಣೆ ಇದೆ. ಬೆಳಗ್ಗೆ , ಸಂಜೆ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರನ್ನು ಕೆಲ ಪುಂಡರು ಚುಡಾಯಿಸುತ್ತಾರೆ. ಇದರಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಅಂಜುವಂತಾಗಿದೆ. ರಾತ್ರಿ ಸೆಕ್ಯೂರಿಟಿಯೂ ಇರುವುದಿಲ್ಲ ಎಂದು ಬಹಳಷ್ಟು ಪೆÇೀಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿನಿಯರು ಮುಜುಗರ ಹಾಗೂ ಹೆದರಿಕೆಯಿಂದ ಕಾಲೇಜಿಗೆ ಬರುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕಾಲೇಜಿನ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿರುವುದು ಏಕೆಂದು ಪೆÇೀಷಕರು ಪ್ರಶ್ನಿಸುತ್ತಿದ್ದಾರೆ.
ಕಳೆದ ವರ್ಷ ಕಾಲೇಜಿನ ಹಿಂಭಾಗದ ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಕೆಲ ಪೀಠೋಪಕರಣಗಳು, ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದವು. ಇಷ್ಟೆಲ್ಲಾ ಆಗಿದ್ದರೂ ಪೆÇಲೀಸರು ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ವಹಿಸದಿರುವುದು ದುರ್ದೈವದ ಸಂಗತಿ.
ಈಗಲಾದರೂ ಪುಂಡುಪೆÇೀಕರಿಗಳ ಹಾವಳಿಯನ್ನು ತಪ್ಪಿಸಿ ಮಧ್ಯ ಸೇವಿಸುವುದಕ್ಕೆ ತಡೆಯೊಡ್ಡಿ , ಕಾಲೇಜಿನ ಹೆಸರನ್ನು ಉಳಿಸಬೇಕೆಂದು ಪಟ್ಟಣದ ಜನರು ಹಾಗೂ ಪೆÇೀಷಕರು ಆಗ್ರಹಿಸಿದ್ದಾರೆ.
ಆ ಮಹಾತ್ಮನ ಹೆಸರಿಗೆ ಕಪ್ಪು ಚುಕ್ಕೆ ಬರುವುದನ್ನು ಪೆÇಲೀಸರ ತಪ್ಪುಸುವರೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.