ನವದೆಹಲಿ, ನ.7- ಅರುಣಾಚಲ ಪ್ರದೇಶದ ಬೋಮ್ದಿಲಾ ಎಂಬಲ್ಲಿ ಸ್ಥಳೀಯ ಪೆÇಲೀಸರೊಂದಿಗೆ ಹಲವು ಸೇನಾ ಸಿಬ್ಬಂದಿಗಳು ಕಾದಾಡಿದ ಪ್ರಕರಣವನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ರಕ್ಷಣಾ ಸಚಿವಾಲಯ ಹೇಳಿದೆ.
ತಮ್ಮ ತಂಡದ ಇಬ್ಬರು ಜವಾನರನ್ನು ದುರ್ನಡತೆ ಆರೋಪದ ಮೇಲೆ ಪಶ್ಚಿಮ ಕೆಮೆಂಗ್ ಜಿಲ್ಲೆಯ ಬೋಮ್ದಿಲಾ ಪೆÇಲೀಸ್ ಠಾಣೆಗೆ ಕರೆತಂದು ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡದ್ದನ್ನು ಪ್ರತಿಭಟಿಸಲು ಅರುಣಾಚಲ ಸ್ಕೌಟ್ಸ್ ದಳ ಮತ್ತು ಭಾರತೀಯ ಸೇನೆಯ ಇನ್ಫೆಂಟ್ರಿ ರೆಜಿಮೆಂಟ್ನ ಕೆಲವು ಸೈನಿಕರು ಠಾಣೆಗೆ ಬಂದು ಪೆÇಲೀಸರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿದೆ.
ಸ್ಥಳೀಯರು ಹೇಳುವ ಪ್ರಕಾರ, ಆರೋಪಿ ಸೈನಿಕರು ಕಳೆದ ನ.2ರಂದು ಇಲ್ಲಿಗೆ ಬುದ್ಧ ಮಹೋತ್ಸವಕ್ಕೆ ಬಂದಿದ್ದರು. ಮದ್ಯ ಸೇವನೆ ಮಾಡಿದ್ದ ಅವರು ಕೆಲವು ಮಹಿಳೆಯರೊಂದಿಗೆ ಕೆಟ್ಟದ್ದಾಗಿ ವರ್ತಿಸಿ ಜನರಿಗೆ ತೊಂದರೆ ಉಂಟುಮಾಡಿದ್ದರು ಎಂದು ವರದಿಗಳು ತಿಳಿಸಿವೆ.