ಬೆಂಗಳೂರು,ಮಾ.7- ಕ್ಯಾಬ್ ನಿಲ್ಲಿಸಿಕೊಂಡು ಮಲಗಿದ್ದ ಚಾಲಕನನ್ನು ಎಬ್ಬಿಸಿದ ಮೂವರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಕೊಡುಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹದೇಶ್ವರನಗರದ ಸುಂಕದ ಕಟ್ಟೆ ನಿವಾಸಿ, ಕ್ಯಾಬ್ ಚಾಲಕ ಉಮೇಶ್ ದರೋಡೆಗೊಳಗಾದವರು.
ಕೊಡಿಗೆಹಳ್ಳಿ ಮುಖ್ಯರಸ್ತೆಯಲ್ಲಿ ಉಮೇಶ್ ಕ್ಯಾಬ್ ನಿಲ್ಲಿಸಿಕೊಂಡು ಇಂದು ಬೆಳಗಿನ ಜಾವನ3.15ರಲ್ಲಿ ನಿದ್ರೆಗೆ ಜಾರಿದ್ದರು.
ಈ ವೇಳೆ ಒಂದೇ ಬೈಕ್ನಲ್ಲಿ ಬಂದ ಮೂವರು ದರೋಡೆಕೋರರು ಉಮೇಶ್ ಅವರನ್ನು ಎಬ್ಬಿಸಿ, ಬೆದರಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಕೊಡುಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.