ಅಯೋಧ್ಯೆಯಲ್ಲಿ ರಾಮಮಂದಿರವಿತ್ತು, ಇನ್ಮುಂದೆಯೂ ಇರುತ್ತದೆ: ಸಿಎಂ ಯೋಗಿ ಆದಿತ್ಯನಾಥ್​​..!

ಲಕ್ನೋಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್​​ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. 151 ಮೀಟರ್​​ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲಿ ಸಿದ್ದತೆ ನಡೆಸಿಕೊಂಡಿದ್ದೇವೆ ಎಂದು ಮತ್ತೊಮ್ಮೆ ಖಾತ್ರಿಗೊಳಿಸಿದ್ಧಾರೆ. ಇದೀಗ ಶೀಘ್ರದಲ್ಲಿಯೇ ಶ್ರೀರಾಮನ ಪ್ರತಿಮೆ ನಿರ್ಮಾಣದ ಕಾರ್ಯ ಶುರುವಾಗುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಶ್ರೀರಾಮನ ಪ್ರತಿಮೆ ಸ್ಥಾಪನೆಗೆ ಎರಡರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಮಗೆ ಶ್ರೀರಾಮ ಪ್ರತಿಮೆ ನಿರ್ಮಾಣದ ಬಗ್ಗೆ ಒಂದಷ್ಟು ಉಪಾಯಗಳು ಹೊಳೆದಿವೆ. ಈಗಾಗಲೇ ಸರ್ಕಾರ ಸ್ಥಳ ಸರ್ವೇಗೆ ಮುಂದಾಗಿದೆ. ಅಲ್ಲದೇ ಶ್ರೀರಾಮನ ಪ್ರತಿಮೆಯ ವಿನ್ಯಾಸವನ್ನು ಅಂತಿಮಗೊಳಿಸಿದ್ದೇವೆ ಎಂದು ಸಿಎಂ ಯೋಗಿ ಭರವಸೆ ನೀಡಿದರು.
 ಈ ಹಿಂದೆಯೇ ದೀಪಾವಳಿ ಬಳಿಕ 151 ಮೀಟರ್​​ ಎತ್ತರದ  ಪ್ರತಿಮೆಯನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್​​ ಆಶ್ವಾಸನೆ ನೀಡಿದ್ದರು. ಈ ಮೂಲಕ ಸಮಸ್ತ ಹಿಂದೂ ಸಮಾಜದ ಆಶಯಗಳನ್ನು ಈಡೇರಿಸುತ್ತೇನೆ. ಶ್ರೀರಾಮನ ಪ್ರತಿಮೆ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಕೂಡ ಶುರುವಾಗಲಿದೆ ಎಂದು ತಿಳಿಸಿದ್ದರು.
ಇನ್ನು ಸರ್ಕಾರದಿಂದ ಅಯೋಧ್ಯೆಗೆ ಹೊಸ ವಿಮಾನ ನಿಲ್ದಾಣದ ಜೊತೆಗೆ ಮೆಡಿಕಲ್ ಕಾಲೇಜು ಕೂಡ ಕಟ್ಟಿಸಲಿದ್ದೇವೆ. ನಿರ್ಮಾಣವಾಗುವ ನೂತನ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು ಹಾಗೂ ಹೊಸ ಮೆಡಿಕಲ್ ಕಾಲೇಜಿಗೆ ರಾಜ ದಶರಥ ಎಂದು ನಾಮಕರಣ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್​​ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿರುವ ವಿರೋಧ​​ ಪಕ್ಷಗಳು ಲೋಕಸಭಾ ಚುನಾವಣೆ ವೇಳೆಗೆ ಮತದಾರರನ್ನು ಸೆಳೆಯುವ ಉದ್ದೇಶಕ್ಕಾಗಿ ಯೋಗಿ ಆದಿತ್ಯನಾಥ್​​ರು ಹೊಸ ಯೋಜನೆಗಳಿಗೆ ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿದ್ಧಾರೆ.
ಕಳೆದ ವರ್ಷದ ದೀಪಾವಳಿ ಹಬ್ಬದ ಭಾಗವಾಗಿ ಅಯೋಧ್ಯೆಯಲ್ಲಿ ದೀಪೋತ್ಸವ ನಡೆಸಲಾಗಿತ್ತು. ಈ ವೇಳೆ ಸರೆಯು ನದಿ ತೀರದಲ್ಲಿ ಸ್ಥಾಪನೆಯಾಗಲಿರುವ ವಿಗ್ರಹವನ್ನು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯಡಿ ನಿರ್ಮಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಅಲ್ಲದೇ ಈ ದೀಪಾವಳಿ ವೇಳೆಗೆ ಅಯೋಧ್ಯೆಯಲ್ಲಿ 151 ಅಡಿ ಎತ್ತರದ ಶ್ರೀರಾಮ ದೇವರ ವಿಗ್ರಹಕ್ಕೆ ಸಿಎಂ ಯೋಗಿ ಆದಿತ್ಯನಾಥ್‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಕೂಡ ಘೋಷಿಸಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ