ಬೆಂಗಳೂರು, ಮಾ.7- ತಾಯಿ-ಮಗನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಚಂದ್ರಪ್ಪ ಅವರನ್ನು ಕಾಡುಗೋಡಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಈ ಹಿಂದೆ ಕಾಡುಗೋಡಿ ಠಾಣೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕೋಲಾರದ ಡಿಸಿಆರ್ಬಿಯಲ್ಲಿ ಇನ್ಸ್ಪೆಕ್ಟರ್ ಆಗಿ ಚಂದ್ರಪ್ಪ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತ ಮೌನೇಶ್ ಅವರ ಪತ್ನಿ ಶ್ರೀದೇವಿ ಅವರು ಕಾಡುಗೋಡಿ ಪೆÇಲೀಸ್ ಠಾಣೆಗೆ ದೂರು ನೀಡಿ ಚಂದ್ರಪ್ಪ ಅವರ ವಿರುದ್ಧ ಆರೋಪ ಮಾಡಿದ್ದಾರೆ.
ತಾಯಿ-ಮಗನ ಆತ್ಮಹತ್ಯೆ ಪ್ರಕರಣದಲ್ಲಿ ದೊರೆತ ಸಾಂದರ್ಭಿಕ ಸನ್ನಿವೇಶ ಹಾಗೂ ವೈಜ್ಞಾನಿಕ ಸಾಕ್ಷಾಧಾರಗಳು ಹಾಗೂ ದೂರಿನಲ್ಲಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಅವರನ್ನು ಬಂಧಿಸಲಾಗಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಚಂದ್ರಪ್ಪ ಅವರನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸುವಂತೆ ಕೋಲಾರ ಎಸ್ಪಿ ಅವರಿಗೆ ಪತ್ರ ಬರೆಯಲಾಗಿದೆ.
ಘಟನೆ ವಿವರ: ಚಂದ್ರಪ್ಪ ಅವರ ಸಹೋದರಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕರಾಗಿದ್ದ ಮೌನೇಶ್ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಯಾದಗಿರಿಯಿಂದ ಮೌನೇಶ ಹಾಗೂ ಈತನ ತಾಯಿ ಸುಂದರಮ್ಮ ಅವರನ್ನು ಐದು ದಿನಗಳ ಹಿಂದೆ ಕರೆಸಿಕೊಂಡು ತಾವು ವಾಸವಾಗಿದ್ದ ಕಾಡುಗೋಡಿಯ ಬೆಳತ್ತೂರಿನ ಎಂಎಸ್ಸಿ ಎಂಪ್ರೆಸ್ ಅಪಾರ್ಟ್ಮೆಂಟ್ನಲ್ಲಿರಿಸಿದ್ದರು.
ಈ ನಡುವೆ ನಿನ್ನೆ ಮುಂಜಾನೆ ತಾಯಿ-ಮಗ ಇಬ್ಬರು ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮೌನೇಶ್ ಬರೆದಿದ್ದ ಡೆತ್ನೋಟ್ ಸ್ಥಳದಲ್ಲಿ ದೊರೆತಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.