ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನ ಅಧ್ಯಕ್ಷ ವಿ.ಎ.ಸೂರಿ ನಿಧನ
ಬೆಂಗಳೂರು, ಮಾ.7-ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನ ಅಧ್ಯಕ್ಷ ವಿ.ಎ.ಸೂರಿ(68) ನಿಧನರಾಗಿದ್ದಾರೆ.
ಪತ್ನಿ ಗಾಯತ್ರಿ, ಪುತ್ರ ಅಶ್ವಿನ್ಕುಮಾರ್, ಪುತ್ರಿ ವಿದ್ಯಾ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವಿ.ಎ. ಸೂರಿ ಅವರು ಯುವ ಕಾಂಗ್ರೆಸ್, ಮಲ್ಲೇಶ್ವರಂ ಪಶ್ಚಿಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಬೆಂಗಳೂರು ಮಹಾನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ 15 ವರ್ಷ ಕಾರ್ಯ ನಿರ್ವಹಿಸಿದ್ದರು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಮಹಾನಗರ ಪಾಲಿಕೆ ನಾಮ ನಿರ್ದೇಶಿತ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು.
ಸಿದ್ಧರಾಮಯ್ಯ ಸರ್ಕಾರ ವಿ.ಎ. ಸೂರಿ ಅವರನ್ನು ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷರನ್ನಾಗಿ ನೇಮಿಸಿತ್ತು.
ಇವರ ನಿಧನಕ್ಕೆ ಅನೇಕ ಗಣ್ಯರು, ಮುಖಂಡರು ಹಾಗೂ ಯಶವಂತಪುರದ ಶ್ರೀ ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರೀ ಸಂಸ್ಥಾನದ ಸಂಸ್ಥಾಪನಾಚಾರ್ಯ ಶ್ರೀ ಚಿದಂಬರ ದೀಕ್ಷಿತ್ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.