ಟೆಹರಾನ್ : ಇಂದಿನಿಂದ ಜಾರಿಗೆ ಬಂದಿರುವ ವಿಶ್ವಸಂಸ್ಥೆಯ ನಿಷೇಧವನ್ನು ಇರಾನ್ ಇಸ್ಲಾಮಿಕ್ ರಿಪಬ್ಲಿಕ್ ಹೆಮ್ಮೆಯಿಂದ ಮೀರಿ ಸಾಗಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.
“ಅಂತಾರಾಷ್ಟ್ರೀಯ ನಿಯಂತ್ರಣಗಳನ್ನು ಮೀರಿ ಹೇರಲಾಗಿರುವ ಕಾನೂನು ಬಾಹಿರ ಮತ್ತು ಅನ್ಯಾಯದ ನಿಷೇಧಗಳನ್ನು ನಾವು ಮೀರಿ ಸಾಗುವುದಾಗಿ ನಾನು ಘೋಷಿಸುತ್ತೇನೆ’ ಎಂದು ರೊಹಾನಿ ಅವರು ಭಾಷಣದಲ್ಲಿ ತಿಳಿಸಿದ್ದಾರೆ.
ದೇಶದ ತೈಲ ಮತ್ತು ಹಣಕಾಸು ರಂಗವನ್ನು ಗುರಿ ಇರಿಸಿ ಕೊಂಡು ಇಂದಿನಿಂದ ವಿಶ್ವಸಂಸ್ಥೆ ಇರಾನ್ ಮೇಲೆ ನಿಷೇಧ ಹೇರಿತ್ತು.
iran-will-proudly-bypass-us-sanctions-rouhani