
ಬೆಂಗಳೂರು,ನ.4-ಕೊಡುಗು ನೆರೆ ಸಂತ್ರಸ್ತರ ನೆರವು ನೀಡಲು ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠ ಹಾಗೂ ನಮ್ಮವರು ಬಳಗದ ವತಿಯಿಂದ ಸಂಜೆ 6 ಗಂಟೆಗೆ ಅರಮನೆ ಮೈದಾನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು
ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗಾಯಕರಾದ ವಿದ್ವಾನ್ ಆರ್.ಕೆ.ಪದ್ಮನಾಭ, ಶಮಿತಾ ಮಲ್ನಾಡ್, ಬಿ.ಕೆ.ಸುಮಿತ್ರ, ರಾಜೇಶ್ ಕೃಷ್ಣನ್ ಹಾಗೂ ನಟರಾದ ಪುನೀತ್ ರಾಜ್ಕುಮಾರ್, ಯಶ್ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದರು.
ಸಂಜೆ 6 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ ಗೇಟ್ ನಂ.4ರಲ್ಲಿ ಕಾರ್ಯಕ್ರಮ ನಡೆಯಲಿದೆ.