ಸತತ 11ನೇ ಟಿ20 ಸರಣಿ ಗೆದ್ದ ಪಾಕಿಸ್ತಾನ: ಹೊಸ ದಾಖಲೆ ಬರೆದ ಸರ್ಫಾರಾಜ್ ಪಡೆ

ಟಿ20 ಕ್ರಿಕೆಟ್​ ಫಾರ್ಮೆಟ್​ನ ಸಾಮ್ರಾಟ ಪಾಕಿಸ್ತಾನ ಮೊನ್ನೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 2-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಸತತ 11ನೇ ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ. ಸರ್ಫಾರಾಜ್ ಪಡೆ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಸರಣಿಯನ್ನ ಕೈಚೆಲ್ಲದೇ ಚುಟುಕು ಪಾರ್ಮೆಟ್​ನಲ್ಲಿ ದಾಖಲೆಗಳನ್ನ ಬರೆದಿದೆ.
ಸತತ 8ನೇ ಗೆಲುವಿನೊಂದಿಗೆ ಹೊಸ ಇತಿಹಾಸ ಬರೆದ ಪಾಕ್
ಕಿವೀಸ್ ವಿರುದ್ಧ ಎರಡನೇ ಟಿ20 ಪಂದ್ಯ ಗೆಲ್ಲುವ ಮೂಲಕ ಸರ್ಫಾರಾಜ್ ಪಡೆ ಕಳೆದ ಜುಲೈನಿಂದ ಆಡಿರುವ ಎಂಟು ಪಂದ್ಯಗಳಿಂದ ಒಂದೇ ಒಂದು ಪಂದ್ಯವನ್ನ ಸೋತಿಲ್ಲ. ಜಿಂಬಾಬ್ವೆ, ಆಸ್ಟ್ರೇಲಿಯಾ ಮತ್ತು ಪಾಕಿಸ್ಥಾನ ವಿರುದ್ಧ ಬ್ಯಾಕ್ ಟು ಬ್ಯಾಟ್​ ಪಂದ್ಯಗಳನ್ನ ಗೆದ್ದು ಸೋಲಿಲ್ಲದ ಸರದಾರನಂತೆ ದಾಪುಗಾಲು ಇಟ್ಟಿದೆ.
ಸತತ 11ನೇ ಟಿ20 ಸರಣಿ ಗೆದ್ದ ಸರ್ಫಾರಾಜ್ ಪಡೆ
ಮೊನ್ನೆ ಎರಡನೇ ಚುಟುಕು ಕದನದಲ್ಲಿ ನ್ಯೂಜಿಲೆಂಡ್ ಸರಣಿ ಗೆಲ್ಲುವ ಮೂಲಕ ಪಾಕಿಸ್ತಾನ 2-0 ಅಂತರದಿಂದ ಸರಣಿ ಗೆದ್ದು ಸಂಭ್ರಮಿಸಿತು. 2016ರಲ್ಲಿ ಕೊಹ್ಲಿ ಪಡೆ 9 ಟಿ20 ಸರಣಿಗಳನ್ನ ಗೆದ್ದು ಹೊಸ ಇತಿಹಾಸ ಬರೆದಿತ್ತು. ಈ ದಾಖಲೆಯನ್ನ ಪಾಕಿಸ್ತಾನ ಅಳಿಸಿ ಹಾಕಿದೆ.
ಟೀಂ ಇಂಡಿಯಾದ ದಾಖಲೆ ಮುರಿದ ಪಾಕಿಸ್ತಾನ
ಕಿವೀಸ್ ವಿರುದ್ಧ ಎರಡನೇ ಟಿ20 ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ದಾಖಲೆಯನ್ನ ಅಳಿಸಿ ಹಾಕಿದೆ. ಪಾಕಿಸ್ತಾನ ಈ ವರ್ಷ ಒಟ್ಟು 16 ಟಿ20 ಪಂದ್ಯಗಳನ್ನ ಗೆದ್ದುಕೊಂಡಿದೆ.
2016ರಲ್ಲಿ ಟೀಂ ಇಂಡಿಯಾ 21 ಟಿ20 ಪಂದ್ಯಗಳಲ್ಲಿ 15 ಪಂದ್ಯಗಳ ಗೆದ್ದು ವಿಶ್ವ ದಾಖಲೆ ಬರೆದಿತ್ತು ಇದೀಗ ಈ ದಾಖಲೆಯನ್ನ ಸರ್ಫಾರಾಜ್ ಪಡೆ ಅಳಿಸಿ ಹಾಕಿದೆ. ಟಿ20 ಫಾರ್ಮೆಟ್​ನಲ್ಲಿ ವರ್ಷ ಅತಿ ಹೆಚ್ಚು ಪಂದ್ಯಗಳನ್ನ ಗೆದ್ದ ದಾಖಲೆಯನ್ನ ಪಾಕಿಸ್ಥಾನ ತನ್ನದಾಗಿಸಿಕೊಂಡಿದೆ. ಈ ಸಾಧೆನಯನ್ನ ಮಾಡಿದ ಪಾಕಿಸ್ತಾನ ಮೊದಲ ತಂಡ ಎಂಬ ಗೌರವಕ್ಕೆ ಪಾತ್ರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ