ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ಕಾರ ಕಾನೂನು ಜಾರಿಗೆ ತರಬಹುದು: ಸುಪ್ರೀಂ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್

ಮುಂಬೈ: ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವುದು ಅಸಾಧ್ಯವೇನಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಆರ್ ಎಸ್ ಎಸ್ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೆ ತರಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನಲೆಯಲ್ಲಿಯೇ ಚೆಲ್ಲಮೇಶ್ವರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೆಲ್ಲಮೇಶ್ವರ್, ಸರ್ಕಾರ ಕಾನೂನು ಜಾರಿಗೆ ತರಬಹುದು ಅಥವಾ ಬಿಡಬಹುದು. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸರ್ಕಾರ ಕೈಗೊಂಡ ಪ್ರಕ್ರಿಯೆಗಳಿಂದ ಸುಪ್ರೀಂಕೋರ್ಟ್ ತೀರ್ಪುಗಳು ರದ್ದಾಗಿದ್ದವು ಎಂದರು.

ಕಾವೇರಿ ವಿವಾದ ಸಂಬಂಧ ಕರ್ನಾಟಕ ಸರ್ಕಾರದ ಕಾನೂನು ಹಾಗೂ ರಾಜಸ್ತಾನ, ಪಂಜಾಬ್ , ಹರಿಯಾಣ ರಾಜ್ಯಗಳ ನಡುವಿನ ನದಿ ನೀರು ವಿವಾದ ವಿಚಾರ ಕೂದ ಇದಕ್ಕೆ ಉದಾಹರಣೆಯಾಗಿವೆ. ಈ ನಿಟ್ಟಿನಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಕಾನೂನು ಜಾರಿ ಅಸಾಧ್ಯವಲ್ಲ ಎಂದರು.

Legislation On Ram Temple Possible, Justice Chelameswar,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ