ಲೋಕೋಪಯೋಗಿ ಇಲಾಖೆ, ಕನ್ನಡ-ಸಂಸ್ಕøತಿ ಇಲಾಖೆ ಮತ್ತು ಆಡಳಿತ ಸಿಬ್ಬಂದಿ ಇಲಾಖೆಯ ಜಂಟಿ ಸಹಯೋಗದಲ್ಲಿ ಎರಡು ಕೋಟಿ ಅನುದಾನದೊಂದಿಗೆ ಕನಕದಾಸರ ಪ್ರತಿಮೆ ನಿರ್ಮಾಣವಾಗಿದೆ. 1.2 ಟನ್ ತೂಕದ ಕಂಚಿನ ಪ್ರತಿಮೆ ಇದಾಗಿದ್ದು, 12 ಅಡಿ ಎತ್ತರವಿದೆ ಎಂದು ವಿವರಿಸಿದರು.

ಕನಕದಾಸರ ಪ್ರತಿಮೆ ಸ್ಥಾಪನೆ
ಬೆಂಗಳೂರು,ಮಾ.7- ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಅನೇಕ ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವುದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಶಾಸಕರ ಭವನದ ಮುಂಭಾಗ ಕನಕದಾಸರ ಪ್ರತಿಮೆ ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷಗಳವರು ಏನೇ ಆರೋಪಗಳನ್ನು ಮಾಡುತ್ತಿದ್ದರೂ ಜನ ನಂಬುವುದಿಲ್ಲ. ಸಿದ್ದರಾಮಯ್ಯ ಅವರು ನೀಡಿರುವ ಅಭಿವೃದ್ಧಿ ಯೋಜನೆಗಳಿಗೆ ಜನಮೆಚ್ಚುಗೆ ಇದೆ ಎಂದರು.
ಲೋಕೋಪಯೋಗಿ ಇಲಾಖೆ, ಕನ್ನಡ-ಸಂಸ್ಕøತಿ ಇಲಾಖೆ ಮತ್ತು ಆಡಳಿತ ಸಿಬ್ಬಂದಿ ಇಲಾಖೆಯ ಜಂಟಿ ಸಹಯೋಗದಲ್ಲಿ ಎರಡು ಕೋಟಿ ಅನುದಾನದೊಂದಿಗೆ ಕನಕದಾಸರ ಪ್ರತಿಮೆ ನಿರ್ಮಾಣವಾಗಿದೆ. 1.2 ಟನ್ ತೂಕದ ಕಂಚಿನ ಪ್ರತಿಮೆ ಇದಾಗಿದ್ದು, 12 ಅಡಿ ಎತ್ತರವಿದೆ ಎಂದು ವಿವರಿಸಿದರು.
ಈ ಪುತ್ಥಳಿಯನ್ನು ಬಿಡದಿಯ ಅಶೋಕ್ ಗುಡೇದಾರ್ ಅವರು ನಿರ್ಮಿಸಿದ್ದರು. ಇದಕ್ಕೂ ಮೊದಲು ಇವರು ಗುಜರಾತ್‍ನಲ್ಲಿನ 48 ಅಡಿ ಎತ್ತರದ ಬಾಹುಬಲಿಯನ್ನು ನಿರ್ಮಿಸಿದ್ದರೆಂದು ಮಾಹಿತಿ ನೀಡಿದರು.
ಪ್ರತಿಮೆಯನ್ನು ಇದೇ 11ರಂದು 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಇದೇ ವೇಳೆ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನೂ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.
ಕನಕದಾಸರ ಪ್ರತಿಮೆ ಸ್ಥಾಪಿಸಿರುವ ಸ್ಥಳಕ್ಕೆ ಮುತ್ತು ಬಂದ ಕೇರಿಗೆ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದ ಅವರು, ಕನಕದಾಸರ ಕೀರ್ತನೆಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಪತಿ ಶಂಕರಮೂರ್ತಿ, ಸಭಾಧ್ಯಕ್ಷ ಕೋಳಿವಾಡ, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಮಾತನಾಡಿ, ಸಾಮಾಜಿಕ ನ್ಯಾಯವನ್ನು ಸಾರುವ ವಾಲ್ಮೀಕಿ ಮತ್ತು ಕನಕದಾಸರ ಪುತ್ಥಳಿ ನಿರ್ಮಾಣ ಮಾಡಿರುವುದು ಸಂತೋಷವನ್ನುಂಟು ಮಾಡಿದೆ. ಇವರ ತತ್ವ ಮತ್ತು ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ