ಬೆಂಗಳೂರು,ಅ.31- ನಡೆದು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ದರೋಡೆಕೋರರ ರಾಡಿನಿಂದ ಒಡೆದು ಬೆದರಿಸಿ 40 ಗ್ರಾಂ ತೂಕದ ಮಾಂಗಲ್ಯ ಸರ ಬಿಚ್ಚಿಸಿಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಸಂಜೆ 5 ಗಂಟೆಯಲ್ಲಿ ಶೈಲಜಾ ಎಂಬುವರು ಕೃಷ್ಣ ಲೇಔಟ್ನ ದೇವಸ್ಥಾನ ಬಳಿ ನಡೆದು ಹೋಗುತ್ತಿದ್ದರು.ಈ ಸಂದರ್ಭದಲ್ಲಿ ಹಿಂಬಾಲಿಸಿ ಬಂದ ದರೋಡೆಕೋರ ಕಬ್ಬಿಣದ ರಾಡಿನಿಂದ ಶೈಲಜಾ ಅವರ ತಲೆಗೆ ಹೊಡೆದು ಸರ ಬಿಚ್ಚಿಕೊಡುವಂತೆ ಹೇಳಿದ್ದಾನೆ.
ದರೋಡೆಕೋರನ ವರ್ತನೆಯಿಂದ ಹೆದರಿದ ಶೈಲಜಾ ಅವರು ತನ್ನ ಕೊರಳಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಿಚ್ಚಿ ಕೊಟ್ಟಿದ್ದಾರೆ.
ದರೋಡೆಕೋರ ಸರದೊಂದಿಗೆ ಪರಾರಿಯಾಗುತ್ತಿದ್ದಾಗ ಶೈಲಜಾ ಸಹಾಯಕ್ಕಾಗಿ ಕೂಗಿಕೊಂಡರಾದರೂ ಪ್ರಯೋಜನವಾಗಿಲ್ಲ.
ದರೋಡೆಕೋರನಿಂದ ಹಲ್ಲೆಗೊಳಗಾದ ಶೈಲಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹುಳಿಮಾವು ಠಾಣೆಗೆ ದೂರು ನೀಡಿದ್ದಾರೆ.