ನವದೆಹಲಿ, ಅ.31- ಏಕತೆಯ ಹರಿಕಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ ನಿಮಿತ್ತ ದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರನ್ ಫಾರ್ ಯೂನಿಟಿಗೆ ಚಾಲನೆ ನೀಡಿದರು.
ದೆಹಲಿಯಲ್ಲಿ ಸದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನದ ನಿಮಿತ್ತ ಆಯೋಜನೆಯಾಗಿದ್ದ ರನ್ ಫಾರ್ ಯೂನಿಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡು ಓಡಿದರು. ಮತ್ತೊಂದೆಡೆ ಅತ್ತ ಭುವನೇಶ್ವರದಲ್ಲೂ ರನ್ ಫಾರ್ ಯೂನಿಟಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನಿ ಓಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಏಕತೆ ಓಟಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಗೃಹಸಚಿವರು ಭಾರತವು ವೈವಿಧ್ಯತೆ ಮತ್ತು ಅನೇಕತೆಯ ವೈಶಿಷ್ಟ್ಯಗಳನ್ನೊಳಗೊಂಡ ದೇಶ. ಇಂತಹ ರಾಷ್ಟ್ರವನ್ನು ಏಕೀಕರಣಗೊಳಿಸುವಲ್ಲಿ ಪಟೇಲರು ನೀಡಿದ ಕೊಡುಗೆ ಅಮೂಲ್ಯ ಎಂದು ಬಣ್ಣಿಸಿದರು.