ನವದೆಹಲಿ: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್ ಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ)ಸೂಚಿಸಿದೆ
ಸುಪ್ರೀಂ ಕೋರ್ಟ್ ಆದೇಶದ ನಂತರ ಬ್ಯಾಂಕ್ ಗಳು ಕಾನೂನು ಸಲಹೆ ಕೇಳಿ ಯುಐಡಿಎಐಗೆ ಪತ್ರ ಬರೆದಿದ್ದವು. ಈ ಸಂಬಂಧ ಕಳೆದ ವಾರ ಬ್ಯಾಂಕ್ ಗಳಿಗೆ ಪತ್ರ ಬರೆದಿರುವ ಯುಐಡಿಎಐ, ಯಾವುದಕ್ಕೆ ಮತ್ತು ಯಾವ ಸನ್ನಿವೇಶದಲ್ಲಿ ಆಧಾರ್ ಬಳಸಬಹುದು ಎಂಬುದರ ಬಗ್ಗೆ ವಿವರಣೆ ನೀಡಿದೆ. ಅಲ್ಲದೆ ಇದರ ಪ್ರತಿಯನ್ನು ಆರ್ ಬಿಐಗೂ ಕಳುಹಿಸಲಾಗಿದೆ ಎಂದು ಯುಐಡಿಎಐ ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರಿ ಸಬ್ಸಿಡಿ ಪಡೆಯಲು ಮತ್ತು ಕಲ್ಯಾಣ ಯೋಜನೆಗಳ ನೇರ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಬಹುದು. ಇತರೆ ಗ್ರಾಹಕರಿಗೆ ಪರಿಶೀಲನೆಗಾಗಿ ಮಾತ್ರ ಆಧಾರ್ ಬಳಸಿ. ಇದು ಸಹ ಕಡ್ಡಾಯವಲ್ಲ. ಸ್ವಯಂ ಪ್ರೇರಣೆಯಿಂದ ಮಾತ್ರ ಎಂದು ಹೇಳಿದ್ದಾರೆ.