ಬೆಂಗಳೂರು, ಅ.27- ಪ್ರಚಾರಕ್ಕಾಗಿ ಮೀ ಟೂ ಅಭಿಯಾನವನ್ನು ಬಳಸಿಕೊಳ್ಳುವವರ ವಿರುದ್ಧ ಹೇಳಿಕೆ ನೀಡಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಪೆÇಲೀಸ್ ಠಾಣೆ ಮೆಟ್ಟಿಲೇರಲು ನಟಿ ನಿರ್ಧರಿಸಿದ್ದಾರೆ.
ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಅವರು ಮೀ ಟೂ ಅಭಿಯಾನ ಒಳ್ಳೆಯದೇ. ಆದರೆ ಇದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಬಾರದು. ಹಲವು ಪ್ರಸಿದ್ಧ ನಟಿಯರು, ಕೆಲವು ನಿರ್ಮಾಪಕರು, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಓಲೈಸಿಕೊಂಡಿರುವುದನ್ನು ನಾನು ನೋಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಇದೇ ವಿಷಯವನ್ನು ಮುಂದಿಟ್ಟು ತನಗೆ ಬೆದರಿಕೆ ಕರೆ ಮಾಡಲಾಗುತ್ತಿವೆ. ಪ್ರತಿಷ್ಠಿತ ವ್ಯಕ್ತಿಗಳು ಬೆದರಿಸುತ್ತಿದ್ದಾರೆ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ನಾನು ಸತ್ಯದ ಪರವಾಗಿ ಮಾತನಾಡಿದ್ದೇನೆ. ಇಲ್ಲಿ ಯಾರ ಪರವೋ, ವಿರುದ್ಧವೋ ಮಾತನಾಡಿಲ್ಲ. ಅನ್ಯಾಯ ಆದಾಗಲೇ ಪ್ರತಿಭಟನೆ ಮಾಡಬೇಕು. ಬಾಲಿವುಡ್ ಚಿತ್ರವನ್ನು ನಾನು ರಿಜೆಕ್ಟ್ ಮಾಡಿ ಬಂದಿದ್ದು ಅದೇ ಕಾರಣಕ್ಕೆ. ಆದರೆ, ಈಗ ಏನಾಗುತ್ತಿದೆ ? ಅವಕಾಶನೂ ಬೇಕು. ಅದನ್ನು ಪಡೆದುಕೊಳ್ಳುವುದಕ್ಕೆ ಹೊಂದಾಣಿಕೆಯನ್ನೂ ಮಾಡಿಕೊಳ್ಳುತ್ತೀರಿ ಎಂದು ಹರ್ಷಿಕಾ ಪೂಣಚ್ಚ ತೀಕ್ಷ್ಮವಾಗಿ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದರು.
ಮೀಟೂ ಅಭಿಯಾನದ ವಿಚಾರದಲ್ಲಿ ನೀವು ಮಾತನಾಡಬಾರದು ಎಂದು ನನ್ನ ಧ್ವನಿಯನ್ನು ತಡೆಯಲಿಕ್ಕೆ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ದೂರು ದಾಖಲಿಸುತ್ತೇನೆ. ಅನ್ನೋನ್ ನಂಬರ್ಗಳಿಂದ ಕಾಲ್ ಬರುತ್ತಿವೆ. ಇದು ಹೀಗೆ ಮುಂದುವರೆದರೆ ನಾನು ಖಂಡಿತ ಪೆÇಲೀಸ್ ಸ್ಟೇಷನ್ ಮೆಟ್ಟಿಲೇರುತ್ತೇನೆ. ಕಾನೂನು ಮೂಲಕ ತಕ್ಕ ಪಾಠ ಕಲಿಸುತ್ತೇನೆ ಎಂಬುದು ಹರ್ಷಿಕಾ ಎಚ್ಚರಿಕೆ ನೀಡಿದ್ದಾರೆ.