ಬೆಂಗಳೂರು, ಅ.26-ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಕಾನೂನು ಆಯೋಗಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ 3ನೇ ಕಂತಿನ 116.50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರೆ, ಕಾನೂನು ಆಯೋಗಕ್ಕೆ 3ನೇ ಕಂತಿನ ಅನುದಾನವಾಗಿ 95.91 ಲಕ್ಷ ರೂ. ಬಿಡುಗಡೆ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಪ್ರಸಕ್ತ ಸಾಲಿನಲ್ಲಿ 466 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಈಗಾಗಲೇ 2 ಕಂತಿನಲ್ಲಿ 233 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಆ ಅನುದಾನ ಈಗಾಗಲೇ ಖರ್ಚಾಗಿರುವುದರಿಂದ 3ನೇ ಕಂತಿನ ಅನುದಾನವನು ಬಿಡುಗಡೆ ಮಾಡಲಾಗಿದೆ.
ಅದೇ ರೀತಿ ಕಾನೂನು ಆಯೋಗಕ್ಕೆ ಪ್ರಸಕ್ತ ಸಾಲಿನಲ್ಲಿ 219 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಮೊದಲೆರಡು ಕಂತಿನಲ್ಲಿ 109.50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಈಗ 3ನೇ ಕಂತಿನಲ್ಲಿ 95.91 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಕಲಬುರಗಿಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿಗೆ 2ನೇ ಕಂತಿನಲ್ಲಿ 1.25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಕಾಲೇಜಿಗೆ ಮೊದಲನೇ ಕಂತಿನಲ್ಲಿ ಈಗಾಗಲೇ 1.25 ಲಕ್ಷ ರೂ.ಗಳನ್ನು ಕಾನೂನು ಇಲಾಖೆ ಬಿಡುಗಡೆ ಮಾಡಿತ್ತು.