ಬೆಂಗಳೂರು, ಅ.26-ಕನ್ನಡ ರಾಜ್ಯೋತ್ಸವ ಪ್ರಯುಕ್ತ, ಕನ್ನಡ ಉಳುವಿಗಾಗಿ, ಕನ್ನಡ ಕವಿಗಳ ತ್ಯಾಗಕ್ಕಾಗಿ, ಸ್ಮರಣೀಯ ನೆನಪಿಗಾಗಿ ಜನ್ಮಭೂಮಿ ಸಾಂಸ್ಕøತಿಕ ನಾಗರಿಕರ ವೇದಿಕೆಯು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಕನ್ನಡದಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 21ನೇ ವರ್ಷದ ದ.ರಾ.ಬೇಂದ್ರೆ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಅರ್ಹ ವಿದ್ಯಾರ್ಥಿಗಳು ಇತ್ತೀಚಿನ ಎರಡು ಭಾವಚಿತ್ರ, ಅಂಕಪಟ್ಟಿಯ ನಕಲು ಪ್ರತಿ, ಸ್ಪಷ್ಟವಾದ ವಿಳಾಸ ಹಾಗೂ ಮೊಬೈಲ್/ ದೂರವಾಣಿ ಸಂಖ್ಯೆಯನ್ನು ಹಾಗೂ ಹೆಸರನ್ನು ಕನ್ನಡದಲ್ಲಿ ಸ್ಪಷ್ಟವಾಗಿ ಬರೆದು ನ.15 ರ ಒಳಗೆ ವೇದಿಕೆಗೆ ಕಳುಹಿಸಿಕೊಡಬೇಕು
ಅರ್ಜಿಯನ್ನು ಎಚ್.ಡಿ.ಕೃಷ್ಣಪ್ಪ (ಪತ್ರಕರ್ತರು) ಸಂಸ್ಥಾಪಕ ಕಾರ್ಯಾಧ್ಯಕ್ಷರು,ಕ ಜನ್ಮಭೂಮಿ ಸಾಂಸ್ಕøತಿಕ ನಾಗರಿಕರ ವೇದಿಕೆ, ನಂ.1023/43, 3ನೇ ಫೆÇ್ರೀ 4ನೇ ಕ್ರಾಸ್, ಗೋಕುಲ 1ನೇ ಹಂತ, 2ನೇ ಫೇಸ್, ಮತ್ತಿಕೆರೆ, ಬೆಂಗಳೂರು-560054 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೊ: 9242141151 ಸಂಪರ್ಕಿಸಬಹುದಾಗಿದೆ.