ವಲಸೆ ನೀತಿ ಬದಲಾವಣೆ: ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೆರಿದ ವಿವಿ ಶಿಕ್ಷಣ ಸಂಸ್ಥೆಗಳು

ಮುಂಬೈ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿ ಬದಲಾವಣೆ ವಿರುದ್ಧ ವಿಶ್ವ ವಿದ್ಯಾಲಯ ಸಂಸ್ಥೆಗಳ ಗುಂಪು ಕೋರ್ಟ್ ಮೆಟ್ಟಿಲೇರಿದೆ. ನ್ಯೂಯಾರ್ಕ್‌ನ ಖಾಸಗಿ ವಿವಿ ದಿ ನ್ಯೂಯಾರ್ಕ್‌ ಸ್ಕೂಲ್ ಸೇರಿದಂತೆ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಟ್ರಂಪ್ ನೀತಿ ವಿರುದ್ಧ ಕಿಡಿಕಾರಿದ್ದಾರೆ.

ವಲಸೆ ನೀತಿ ಬದಲಾಯಿಸಿದ ಟ್ರಂಪ್ ಸರಕಾರದ ಕ್ರಮದಿಂದಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದ್ದು, ಅದನ್ನು ಪ್ರಶ್ನಿಸಿ ಸರಕಾರದ ವಿರುದ್ಧ ದಾವೆ ಹೂಡಿವೆ. ಯುಎಸ್ ಸಿಟಿಜನ್‌ಶಿಪ್‌ ಅಂಡ್ ಇಮಿಗ್ರೇಶನ್‌ ಸರ್ವಿಸಸ್‌ (ಯುಎಸ್‌ಸಿಐಎಸ್‌) ಪ್ರಕಟಿಸಿರುವ ಈ ಬದಲಾವಣೆ ಆಗಸ್ಟ್‌ 9ರಿಂದ ಜಾರಿಯಲ್ಲಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಾಸ್ತವ್ಯದ ಅವಧಿ ಮುಗಿಯದಿದ್ದರೂ ಶಿಕ್ಷಣದ ಅವಧಿ ಮುಗಿದ ಕ್ಷಣದಿಂದಲೇ ತಾನಾಗಿಯೇ ‘ಅಕ್ರಮ ವಲಸಿಗರ’ ಹಣೆಪಟ್ಟಿ ಬರುತ್ತದೆ ಎಂದುದೂರಿದ್ದಾರೆ.

ಹಿಂದಿನ ನೀತಿಯನ್ನು ಉಲ್ಲೇಖಿಸಿರುವ ಅರ್ಜಿದಾರರು, ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಿದ್ದಾರೆ. ಅಗತ್ಯವಿದ್ದರೆ, ವ್ಯಕ್ತಿಗಳು 180 ದಿನಗಳ ಗಡುವಿನೊಳಗೆ ದೇಶ ತೊರೆಯಬಹುದಾಗಿದೆ. ಅಲ್ಲದೆ ಈ ಮೂಲಕ ಮೂರರಿಂದ 10 ವರ್ಷಗಳ ಅವಧಿಗೆ ಮರುಪ್ರವೇಶ ನಿಷೇಧದ ಭೀತಿಯಿಂದಲೂ ಪಾರಾಗಬಹುದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ