ಬೆಂಗಳೂರು, ಅ.25-ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ.ಕೆ.ಎಸ್.ರಾಜಣ್ಣ ಅವರು ಚುನಾವಣಾ ಖರ್ಚು, ವೆಚ್ಚಕ್ಕಾಗಿ ನೆರವು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಚೇತನರ ಪ್ರತಿನಿಧಿಯಾಗಿ ನಾನು ಪ್ರಸ್ತುತ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಹಾಗಾಗಿ ನಾನು ಉದ್ಯಮಿಗಳಿಂದ ಆರ್ಥಿಕ ಸಹಾಯ ಕೋರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ಜಾತಿ, ಧರ್ಮ, ಭಾಷಾವಾರು ಹಾಗೂ ಲಿಂಗ ಆಧಾರಿತ ಮತ ಕ್ಷೇತ್ರಗಳ ವಿಂಗಡಣೆ ಮೀಸಲಾತಿ ಜಾರಿಯಲ್ಲಿದೆ. ಆದರೆ ಇದುವರೆಗೂ ಅಂಗವಿಕಲರಿಗೆ ಶಾಸನಸಭೆಗಳಲ್ಲಿ ಪ್ರಾತಿನಿಧಿಕವಾಗಿ ಯಾವುದೇ ಮೀಸಲಾತಿ ಇಲ್ಲದಿರುವುದು ವಿಷಾದನೀಯ ಎಂದರು.
ಹಾಗಾಗಿ ಈ ಬಾರಿಯ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ವಿಶೇಷ ಚೇತನರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಮೂಲತಃ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ ಜನಿಸಿದ್ದು, ಗ್ರಾಮೀಣ ಭಾಗದ ಜನರ ಹಾಗೂ ನಗರ ನಾಗರಿಕರ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದೇನೆ. ವಿಶೇಷವಾಗಿ ವಿಕಲಚೇತನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳ ಬಗ್ಗೆ ಚಿಂತನೆ ನಡೆಸಿದ್ದು, ಅರ್ಹರಿಗೆ ಇವುಗಳನ್ನು ಕಲ್ಪಿಸುವ ಉದ್ದೇಶದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಯಾವುದೇ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಪ್ರಜಾ ಪ್ರತಿನಿಧಿಯಾಗಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, ಉದ್ಯಮಿಗಳಿಂದ ನಾನು ಆರ್ಥಿಕ ಸಹಾಯ ಕೋರುತ್ತಿರುವುದಾಗಿ ತಿಳಿಸಿದರು.
ಕೆ.ಎಸ್.ರಾಜಣ್ಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಿಂಗರಾಜಪುರ ಶಾಖೆ, ಬೆಂಗಳೂರು-560084, ಅಕೌಂಟ್ ನಂಬರ್: 38010869024, ಐಎಫ್ಎಸ್ಸಿ ಕೋಡ್:ಖಆಐಘೆ0040283, Iಐಇ್ಕ560002431 ಈ ವಿಳಾಸಕ್ಕೆ ಹಣ ಕಳುಹಿಸುವಂತೆ ಕೋರಲಾಗಿದೆ.