ಭ್ರಷ್ಟ ಬಿಜೆಪಿಯನ್ನು ಸೋಲಿಸುವಂತೆ ರಾಜ್ಯದ ಮತದಾರರಿಗೆ ಸಿಪಿಐ(ಎಂ) ಕರೆ

ಬೆಂಗಳೂರು, ಅ.25- ನ.3ರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ನೆರವಾಗುತ್ತಿರುವ ಮತ್ತು ದುಡಿಯುವ ಜನತೆಯ ವಿರೋಧಿಯಾದ ಭ್ರಷ್ಟ ಬಿಜೆಪಿಯನ್ನು ಸೋಲಿಸುವಂತೆ ರಾಜ್ಯದ ಮತದಾರರಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಕರೆ ನೀಡಿದೆ.

ಆಯಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗಳಿಗೆ ಮತ್ತು ಪಕ್ಷಗಳಿಗೆ ಮತದಾರರು ಮತ ನೀಡಲು ಮನವಿ ಮಾಡಿದೆ. ಇದಕ್ಕಾಗಿ ಆಯಾ ಕ್ಷೇತ್ರಗಳ ಸಿಪಿಐ(ಎಂ) ಪಕ್ಷದ ಘಟಕಗು ಸ್ವತಂತ್ರವಾಗಿ, ವ್ಯಾಪಕವಾದ ಪ್ರಚಾರದಲ್ಲಿ ತೊಡಗಲು ರಾಜ್ಯ ಸಮಿತಿ ಕರೆ ನೀಡಿದೆ. ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆಗೆ ನೀಡಲಾಗಿದ್ದ ಒಂದೇ ಒಂದು ಭರವಸೆಯನ್ನು ಅದು ಈಡೇರಿಸಲಿಲ್ಲ.

ರೈತರ ಆತ್ಮಹತ್ಯೆಗಳನ್ನು ತಡೆಯಲು ಅವರ ಸಾಲ ಮನ್ನಾ ಮಾಡುವುದಾಗಿ ಮತ್ತು ಅವರು ಸಾಲಗಾರರಾಗದಂತೆ ತಡೆಯಲು ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಕೃಷಿ ಆಯೋಗದ ಸಲಹೆಯಂತೆ ಕೃಷಿ ಉತ್ಪನ್ನಗಳ ವೆಚ್ಚದ ಒಂದೂವರೆ ಪಟ್ಟು ಬೆಲೆ ನೀಡುವುದಾಗಿ ಹೇಳಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ನಂತರ ಹಾಗೆ ನೀಡಲಾಗದೆಂದು ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ವಚನ ಸಲ್ಲಿಸಿ ರೈತರ ಬೆನ್ನಿಗೆ ಚೂರಿ ಹಾಕಿದೆಯೆಂದು ಸಿಪಿಐ(ಎಂ) ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ದೂರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ