2024 ರಲ್ಲಿ ಭಾರತ ವಿಶ್ವದ 3ನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆ !

ನವದೆಹಲಿಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಸಮೀಕ್ಷೆಯಂತೆ ಅಮೆರಿಕಾದ ನಂತರ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆಯಾಗಲಿದೆ ಎಂದು ತಿಳಿದುಬಂದಿದೆ.ಮೂರನೇ ಸ್ಥಾನದಲ್ಲಿರುವ ಬ್ರಿಟನ್ ನ್ನು ಹಿಂದಿಕ್ಕಿ ಭಾರತ ಆ ಸ್ಥಾನವನ್ನು ಅಲಂಕರಿಸಲಿದೆ.

2020 ರ ಮಧ್ಯದಲ್ಲಿ  ಚೀನಾ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. IATA ಪ್ರಕಾರ ಪ್ರಸ್ತುತ ವಾಯು ಯಾನದ ಟ್ರೆಂಡ್ ನೋಡಿದರೆ ಪ್ರಯಾಣಿಕರ ಸಂಖ್ಯೆ  2037 ರಲ್ಲಿ 8.2 ಬಿಲಿಯನ್ ನಿಂದ ದ್ವಿಗುಣಗೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.

2037 ರ ಹೊತ್ತಿಗೆ  572 ಮಿಲಿಯನ್ ಪ್ರಯಾಣಿಕರಲ್ಲಿ  414 ಮಿಲಿಯನ್ ಹೊಸ ಪ್ರಯಾಣಿಕರು ಭಾರತದವರಾಗಿರುತ್ತಾರೆ ಎಂದು ತಿಳಿದುಬಂದಿದೆ.ಮುಂದಿನ ಎರಡು ದಶಕಗಳಲ್ಲಿ, 3.5% ನಷ್ಟು ವಾರ್ಷಿಕ ಬೆಳವಣಿಗೆಯ ದರವನ್ನು ನಿರೀಕ್ಷಿಸುತ್ತದೆ ಎನ್ನಲಾಗಿದೆ.

ಮುಂದಿನ 20 ವರ್ಷಗಳಲ್ಲಿ ಒಟ್ಟು ಅರ್ಧದಷ್ಟು ಹೊಸ ಪ್ರಯಾಣಿಕರನ್ನು ಏಷ್ಯಾ-ಪೆಸಿಫಿಕ್ ಪ್ರದೇಶದಿಂದ ವಾಯುಯಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಕಾರಣ  ಈ ನಿರಂತರ ಆರ್ಥಿಕ ಬೆಳವಣಿಗೆ,ಆದಾಯ ಎಂದು ವರದಿ ಹೇಳಿದೆ.ಒಂದು ವೇಳೆ ಸರ್ಕಾರಗಳು ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಿದರೆ ಇಂತಹ ವಾಯುಯಾನದ ಪ್ರಯೋಜನಗಳಿಗೆ ಕಡಿತ ಬಿಳಲಿದೆ ಅಸೋಸಿಯೇಷನ್ ​​ಎಚ್ಚರಿಸಿದೆ.

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ