ಬೆಂಗಳೂರು, ಮಾ.6- ಅತಿ ವೇಗವಾಗಿ ಮುನ್ನುಗ್ಗಿದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿರಾ ಮೂಲದ ಚೇತನ್(24) ಮೃತಪಟ್ಟ ಬೈಕ್ ಸವಾರನಾಗಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.
ಗಾರ್ಮೆಂಟ್ವೊಂದರ ನೌಕರನಾಗಿದ್ದ ಚೇತನ್ 8ನೇ ಮೈಲಿನಲ್ಲಿ ವಾಸವಾಗಿದ್ದನು. ಕೆಲಸ ಮುಗಿಸಿಕೊಂಡು ಸ್ನೇಹಿತನೊಂದಿಗೆ ರಾತ್ರಿ 10.30ರಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ಎರಡನೇ ಹಂತ, ಐಸಿಐಸಿ ಬ್ಯಾಂಕ್ ರಸ್ತೆಯ ಎನ್ಟಿಟಿಎಫ್ ಸಿಗ್ನಲ್ ಬಳಿ ಅತಿ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ 3 ಗಂಟೆಯಲ್ಲಿ ಚೇತನ್ ಮೃತಪಟ್ಟಿದ್ದು, ಈತನ ಸ್ನೇಹಿತ ಚೇತರಿಸಿಕೊಳ್ಳುತ್ತಿದ್ದಾನೆ.
ಪೀಣ್ಯ ಸಂಚಾರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.