ಚೆನ್ನೈ: ದೇಶಾದ್ಯಂತ ಈಗ ಮಿ ಟೂ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಚಿತ್ರರಂಗದಲ್ಲಂತೂ ಮಿ ಟೂ ಅಭಿಯಾನ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ನಡುವೆ ದಕ್ಷಿನ ಭಾರತದ ಖ್ಯಾತ ನಟಿ ಅಮಲಾ ಪೌಲ್ ನಿರ್ದೇಶಕರೊಬ್ಬರ ವಿರುದ್ಧ ಮಿ ಟೂ ಆರೋಪ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಮಲಾ ಪೌಲ್ ತಮಿಳು ಚಿತ್ರದ ಚಿತ್ರೀಕರಣದ ವೇಳೆ ತಮಗಾದ ಕಹಿ ಅನುಭವದ ಕುರಿತು ಹಂಚಿಕೊಂಡಿದ್ದಾರೆ..
ತಮಿಳಿನ ತಿರುಟ್ಟು ಪಾಯಲೆ 2 ಚಿತ್ರದಲ್ಲಿ ನಟಿಸಿದ್ದ ವೇಳೆ ಚಿತ್ರದ ಚಿತ್ರೀಕರಣದ ಸಂದರ್ಬದಲ್ಲಿ ನಿರ್ದೇಶಕ ಸುಶಿ ಗಣೇಶನ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಅಮಲಾ ಆರೋಪಿಸಿದ್ದಾರೆ.