ಚೆನ್ನೈ: ವಿವಿ ಮಿನರಲ್ಸ್ ಹಾಗೂ ಅದರ ನಾಲ್ಕು ಶಾಖೆಗಳು ಮತ್ತು ಮಾಲೀಕ ಎಸ್. ವೈಕುಂಡರಾಜನ್ ಗೆ ಸೇರಿದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ವಿವಿ ಮಿನರಲ್ಸ್‌ನಿಂದ ಅಕ್ರಮವಾಗಿ ನಿಷೇಧಿತ ಖನಿಜ ಹಾಗೂ ಹಣವನ್ನು ವಿದೇಶಗಳಿಗೆ ವರ್ಗಾವಣೆ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ಕಂಪನಿಯು 1989ರಲ್ಲಿ ಸ್ಥಾಪನೆಯಾಗಿದೆ.