ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವೂ

ಬೆಂಗಳೂರು, ಮಾ.6- ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಾದಗಿರಿ ಮೂಲದ ಸುಂದರಮ್ಮ (60), ಮೌನೇಶ್ (37) ಸಾವನ್ನಪ್ಪಿರುವ ತಾಯಿ-ಮಗ.
ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಅಪಾರ್ಟ್‍ಮೆಂಟ್‍ನ 5ನೆ ಮಹಡಿಯ ಸಿಟ್‍ಜಾಟ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ.
ಈ ಹಿಂದೆ ಕಾಡುಗೋಡಿ ಪೆÇಲೀಸ್ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಸ್ತುತ ಕೋಲಾರದಲ್ಲಿ ಡಿಸಿಆರ್‍ಬಿ ಇನ್ಸ್‍ಪೆಕ್ಟರ್‍ರೊಬ್ಬರ ಸಹೋದರಿಯನ್ನು ಯಾದಗಿರಿಯಲ್ಲಿ ಸರ್ಕಾರಿ ಬಸ್ ನಿರ್ವಾಹಕರಾಗಿದ್ದ ಮೌನೇಶ್ ಪ್ರೀತಿಸುತ್ತಿದ್ದು, ಇವರಿಬ್ಬರು ಮನೆ ಬಿಟ್ಟು ಸಹ ಹೋಗಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಇನ್ಸ್‍ಪೆಕ್ಟರ್ ಹಾಗೂ ಮೌನೇಶ್ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ಇನ್ಸ್‍ಪೆಕ್ಟರ್ ತಂಗಿ ಕಾಣೆಯಾಗಿದ್ದು, ಈ ಬಗ್ಗೆ ಕಾಡುಗೋಡಿ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ತಂಗಿ ಕಾಣಿಸದಿದ್ದಕ್ಕೆ ಕೋಪಗೊಂಡ ಇನ್ಸ್‍ಪೆಕ್ಟರ್ ಯಾದಗಿರಿಯಲ್ಲಿದ್ದ ಮೌನೇಶ್ ಹಾಗೂ ಆತನ ತಾಯಿಯನ್ನು ಬೆಂಗಳೂರಿಗೆ ಕರೆತಂದು ತಾನು ವಾಸವಾಗಿದ್ದ ಬೆಳ್ತೂರು ಅಪಾರ್ಟ್‍ಮೆಂಟ್ ಫ್ಲಾಟ್‍ನಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ.
ಆದರೆ, ಈ ನಡುವೆ ಏನಾಯಿತೊ ಏನೋ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ತಾಯಿ-ಮಗ ಇಬ್ಬರೂ ಅಪಾರ್ಟ್‍ಮೆಂಟ್ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಕಾಡುಗೋಡಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ತನಿಖೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ