ವಿಶಾಖಪಟ್ಟಣ: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು.
322 ರನ್‍ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಕೊನೆಯ ಎಸೆತದವರೆಗೂ ಗೆಲುವಿನ ಅಸೆಯಲ್ಲಿತ್ತು. ಆದರೆ ಕೊನೆಯಲ್ಲಿ ತಂಡದ ಬ್ಯಾಟ್ಸ್‍ಮನ್ ಶಾಯ್ ಹೋಪ್ ಬೌಂಡರಿ ಹೊಡೆದು ಪಂದ್ಯ ಟೈ ಆಯ್ತು. ಕೊನೆಯವರೆಗೂ ಹೋರಾಟ ನಡೆಸಿದ ಶಾಯ್ ಹೋಪ್ ಅಜೇಯ 123 ರನ್ ಗಳಿಸಿದ್ರು. ತಂಡದ ಮತ್ತೊರ್ವ ಬ್ಯಾಟ್ಸ್‍ಮನ್ ಶಿಮ್ರಾನ್ ಹೇಟ್ಮರ್ 94 ರನ್ ಗಳಿಸಿ ಶತಕ ವಂಚಿತರಾದ್ರು. ಕುಲ್‍ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದ್ರು.
ಇದಕ್ಕೂ ಮುನ್ನ ಟೀಂ ಇಂಡಿಯಾ ನಿಗದಿತ ಓವರ್‍ನಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು. ವಿರಾಟ್ ಕೊಹ್ಲಿ ನಿರೀಕ್ಷೆಯಂತೆ 81 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ವೇಗದ ಹತ್ತು ಸಾವಿರ ರನ್ ಪೂರೈಸಿ ದಾಖಲೆ ಬರೆದ್ರು. ಆಕರ್ಷಕ ಶತಕ ಬಾರಿಸಿ 37ನೇ ಶತಕ ಬಾರಿಸಿದ್ರು. ಕೊಹ್ಲಿ ಅಜೇಯ 157 ರನ್ ಬಾರಿಸಿದ್ರು. ಅಂಬಾಟಿ ರಾಯ್ಡು 73 ರನ್ ಗಳಿಸಿದ್ರು.